For Quick Alerts
  ALLOW NOTIFICATIONS  
  For Daily Alerts

  ಇಮ್ರಾನ್ ತುಟಿಗೆ ತುಟಿ ಒತ್ತಿದ ರಣಬೀರ್

  By Mahesh
  |

  ಬಾಲಿವುಡ್ ನಟರಾದ ರಣಬೀರ್ ಕಪೂರ್ ಮತ್ತು ಇಮ್ರಾನ್ ಖಾನ್ ಸ್ಟಾರ್ ವಲ್ಡ್ ಚಾನಲ್ ನಲ್ಲಿ ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ "ಕಾಫಿ ವಿತ್ ಕರಣ್" ಜನಪ್ರಿಯ ಶೋನಲ್ಲಿ ಲಿಪ್‌ಲಾಕ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಕರಣ್ ನಿರ್ದೇಶಿಸುತ್ತಿರುವ "ದೋಸ್ತಾನಾ ಚಿತ್ರ ಮುಂದುವರಿದ ಭಾಗದಲ್ಲಿ ಸಲಿಂಗಿಗಳ ಪಾತ್ರವಿದ್ದು, ಆ ಪಾತ್ರದಲ್ಲಿ ನಟಿಸಲು ತಮಗೆ ಅವಕಾಶ ನೀಡಬೇಕು ಎಂದು ಎಂಬುದು ರಣಬೀರ್ ಮತ್ತು ಇಮ್ರಾನ್ ಬೇಡಿಕೆಯಾಗಿದ್ದು ಇದೇ ಹಿನ್ನೆಲೆಯಲ್ಲಿ ಕರಣ್ ಮನವೊಲಿಸಲು ಟಿವಿ ಶೋನಲ್ಲೇ ಇಂಥಹದ್ದೊಂದು ಸಾಹಸಕ್ಕೆ ಕೈ ಹಾಕಿದರೆಂದು ಹೇಳಲಾಗುತ್ತಿದೆ. ದೋಸ್ತಾನಾ ಮೊದಲ ಭಾಗದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಜಾನ್ ಅಬ್ರಾಹಂ ಸಲಿಂಗಿಗಳ ರೀತಿಯಲ್ಲಿ ನಟಿಸಿದ್ದರು.

  ತಾವೂ ಕೂಡ ಸಲಿಂಗಿಗಳ ಪಾತ್ರದಲ್ಲಿ ನಟಿಸಬಲ್ಲೆವು ಎಂಬುದನ್ನು ಕರಣ್‌ಗೆ ಇಂಪ್ರೆಸ್ ಮಾಡಲು ಅವರು ಈ ಹುಚ್ಚು ಸಾಹಸ ಮಾಡಿದರು. ರಣಬೀರ್ ಮತ್ತು ಇಮ್ರಾನ್ ಹುಚ್ಚಾಟದಿಂದಾಗಿ ವಿಚಲಿತರಾದ ಕರಣ್ ಜೋಹರ್ ತಕ್ಷಣವೇ ಬ್ರೇಕ್ ಎಂದು ಹೇಳಿದರು. ಆದರೂ, ಎರೆಡೆರಡು ಬಾರಿ ಲಿಪ್ ಲಾಕ್ ಮಾಡುವ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದು ಉದ್ದೇಶಪೂರ್ವಕವೆ ಅಥವಾ ಸಡನ್ ಆಗಿ ಬಂದ ಐಡಿಯಾನಾ ಎಂಬುದರ ಬಗ್ಗೆ ಇಬ್ಬರು ಯುವ ನಟರು ಬಾಯ್ಬಿಟ್ಟಿಲ್ಲ.

  English summary
  Ranbir Kapoor and Imran Khan ended the speculation around their cold war by cheating a liplock on Koffee with Karan.They demanded that KJo to cast them in his Dostana sequel.
  Friday, November 12, 2010, 18:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X