For Quick Alerts
  ALLOW NOTIFICATIONS  
  For Daily Alerts

  ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈಗೆ ಬಾಲಿವುಡ್ ಬುಲಾವ್

  By Rajendra
  |

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿರುವ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ಈಗ ಮುಂಬೈ ಕಡೆಗೆ ಪಾದ ಬೆಳೆಸಿದ್ದಾರೆ. ಲಕ್ಷ್ಮಿ ರೈಗೆ ಬಾಲಿವುಡ್‌ನಿಂದ ಬುಲಾವ್ ಬಂದಿದೆ. ದಕ್ಷಿಣ ಧ್ರುವದಿಂದ ಉತ್ತರ ಧ್ರುವಕೆ ಲಕ್ಷ್ಮಿ ರೈ ಪ್ರಯಾಣ ಶೀಘ್ರದಲ್ಲೇ ಸಾಗಲಿದೆ.

  'ಬಿಂದಿ ಬಜಾರ್ ಇಂಕ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅಂಕುಶ್ ಭಟ್ ತಮ್ಮ ಮುಂದಿನ ಚಿತ್ರದಲ್ಲಿ ಲಕ್ಷ್ಮಿ ರೈಗೆ ಚಾನ್ಸ್ ನೀಡಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರದ ಕುಲ, ಗೋತ್ರ, ನಕ್ಷತ್ರಗಳೂ ಇನ್ನಷ್ಟೇ ಗೊತ್ತಾಗಬೇಕು. ಈ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಕೂಡ ಇರುತ್ತಾರಂತೆ.

  ಕನ್ನಡದ 'ಕಲ್ಪನ' ಚಿತ್ರ ಸೇರಿದಂತೆ ಲಕ್ಷ್ಮಿ ರೈ ಕೈಯಲ್ಲಿ ಮಲಯಾಳಂನ 'ಕೋಬ್ರ', ತಮಿಳಿನ 'ಯೋಧ 2', ತೆಲುಗಿನ 'ಅಧಿನಾಯಕುಡು' ಸೇರಿದಂತೆ ಹಲವು ಚಿತ್ರಗಳಿವೆ. ಇತ್ತೀಚೆಗೆ ಲಕ್ಷ್ಮಿ ರೈ ಬಿಜಿಯಾಗಿರುವ ಕಾರಣ ತಮಿಳಿನ ಎರಡು ಚಿತ್ರಗಳನ್ನು ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದು ಕಾರಣ ನೀಡಿ ಕ.ಬುಗೆ ಎಸೆದಿದ್ದಾರೆ. (ಏಜೆನ್ಸೀಸ್)

  English summary
  Belgaum beauty Lakshmi Rai debut to Bollywood. It is reported that Anushk who directed Bhindi Baazaar Inc is keen to rope in Lakshmi Rai for the yet to be titled film, which also has Mallika Sherawat. She is acting in Kalpana in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X