For Quick Alerts
  ALLOW NOTIFICATIONS  
  For Daily Alerts

  ಶಾರುಖ್, ಅಭಿಷೇಕ್ ಮಧ್ಯೆ ಈಗ ಫೆವಿಕಾಲ್ ನಂಟು

  |

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ನಟ ಹೃತಿಕ್ ರೋಶನ್ ಮತ್ತು ಅರ್ಜುನ್ ರಾಂ ಪಾಲ್ ಅವರನ್ನು ಡಾಬೂ ರತ್ನಾನಿ ಪಾರ್ಟಿಯ ಫೋಟೋದಲ್ಲಿ ಅವಾಯ್ಡ್ ಮಾಡಿದ್ದರೂ, ಅಭಿಷೇಕ್ ಬಚ್ಚನ್ ಜತೆ ಫೋಟೋ ತೆಗೆಸಿಕೊಳ್ಳುವ ಮೂಲಕ ತಮ್ಮಿಬ್ಬರಲ್ಲಿ ವೈಮನಸ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

  ಇತ್ತೀಚಿಗೆ ಗೆಳೆತನಕ್ಕೆ, ಹೊಸ ಫ್ರೆಂಡ್ ಶಿಪ್ ಗೆ ಆಹ್ವಾನ ನೀಡುತ್ತಿರುವ ಶಾರುಖ್, ಅಭಿಷೇಕ್ ಬಚ್ಚನ್ ಸ್ನೇಹಕ್ಕೆ ಹಸ್ತ ಚಾಚಿದ್ದಾರೆ. ಅಭಿ ಕೂಡ ಹಳೆಯದನ್ನು ಮರೆತು ಮತ್ತೆ ಒಂದಾಗಿದ್ದಾರೆ. ಹೊಸ ಸ್ನೇಹ ಬೆಸೆದುಕೊಂಡು ಇಬ್ಬರೂ ಖುಷಿಖುಷಿಯಾಗಿದ್ದಾರೆ. ಹಳೆಯ ಭಿನ್ನಾಭಿಪ್ರಾಯ ಮುಂದುವರಿಸದಿರಲು ಇಬ್ಬರೂ ತೀರ್ಮಾನಿಸಿದ್ದಾರೆ.

  ಶಾರುಖ್ ಖಾನ್ ಕತ್ರಿನಾ ಕೈಫ್ ಜೊತೆ ಯಶ್ ರಾಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಸ್ಥಳಕ್ಕೆ ಬರಲು ಅಭಿಷೇಕ್ ಗೆ ಶಾರುಖ್ ಕರೆ ಕಳುಹಿಸಿದ್ದಾರೆ. ಅಭಿ, ಶಾರುಖ್ ಕರೆ ಮನ್ನಿಸಿ ಬಂದಿದ್ದಾರೆ ಕೂಡ. ಆದರೆ ಶಾರುಖ್ ಯಾಕೆ ಕರೆದದ್ದು, ಅಭಿ ಬಂದಿದ್ದು ಯಾಕೆ? ಈ ವಿಷಯ ಇನ್ನೂ ಬಹಿರಂಗಗೊಂಡಿಲ್ಲ. ಅಭಿ ಅಥವಾ ಶಾರುಖ್ ಬಾಯಿಬಿಡುತ್ತಿಲ್ಲ. ಕಾಲವೇ ಉತ್ತರಿಸುತ್ತದೆ, ಕಾಯಬೇಕು ಅಷ್ಟೇ! (ಏಜೆನ್ಸೀಸ್)

  English summary
  Bollywood superstar Shahrukh Khan might have been avoided by close friends Hrithik Roshan and Arjun Rampal at photographer Dabboo Ratnani party. But he patched up Abhishek Bachchan, who was said to have differences with SRK.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X