»   » ಮತ್ತೆ ರಜಿನಿ ಬಾಬಾ ಕಾಲಿಗೆ ಬಿದ್ದ ಕಿಂಗ್ ಖಾನ್

ಮತ್ತೆ ರಜಿನಿ ಬಾಬಾ ಕಾಲಿಗೆ ಬಿದ್ದ ಕಿಂಗ್ ಖಾನ್

Posted By:
Subscribe to Filmibeat Kannada

ರಾ.ಒನ್ ಚಿತ್ರದ ಪ್ರಚಾರಕ್ಕಾಗಿ ಎಲ್ಲ ರೀತಿಯಲ್ಲೂ ಸಜ್ಜಾಗಿರುವ ಕಿಂಗ್ ಖಾನ್ ಶಾರುಖ್ ಮತ್ತೊಮ್ಮೆ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಆಶೀರ್ವಾದ ಬೇಡಿದ್ದಾರೆ.

ರಜನಿಕಾಂತ್ ಅವರ ಬ್ಲಾಕ್ಲ್ ಬಾಸ್ಟರ್ ಚಿತ್ರ ಎಂಧಿರನ್ ನಲ್ಲಿ ಕಾಣಿಸಿಕೊಂಡ ಚಿತ್ತಿ ಪಾತ್ರ ರಾ.ಒನ್ ನಲ್ಲೂ ಕಾಣಿಸಿಕೊಳ್ಳಲಿದೆ. ರಜನಿ ಅವರ ಅತಿಥಿ ಪಾತ್ರದಿಂದ ಶಾರುಖ್ ಫುಲ್ ಖುಷ್ ಆಗಿದ್ದು, ಚಿತ್ರವನ್ನು ದಕ್ಷಿಣ ಭಾರತದಲ್ಲಿ ಚೆನ್ನಾಗಿ ಓಡುವಂತೆ ಮಾಡಲು ಈ ಗಿಮಿಕ್ ಬಳಸಿದ್ದಾರೆ.

ಚೆನ್ನೈನಲ್ಲಿ ರಾ.ಒನ್ ಚಿತ್ರದ ಪ್ರಚಾರಕ್ಕೆ ಬಂದಿದ್ದ ಶಾರುಖ್ ಖಾನ್, ನಾನು ಚಿತ್ರದ ಕಥೆ ಹೆಣೆಯುವಾಗಲೇ ರಜನಿ ಅವರನ್ನು ಮನಸ್ಸಿನಲ್ಲಿ ನೆನೆದುಕೊಂಡಿದ್ದೆ. ಅವರ ಅನಾರೋಗ್ಯದ ಕಾರಣ ಕೊಂಚ ಕಾಲ ಕಾಯಬೇಕಾಯಿತು.

ಗಿಮಿಕ್ ಅಲ್ಲ: ರಜನಿ ಸಾರ್ ನಿಜವಾದ ಸೂಪರ್ ಹೀರೋ, ಅವರ ಕೃಪೆ ಇದ್ದರೆ ನಮ್ಮಂತ ನಟರು ಇನ್ನೂ ಹೆಚ್ಚಿನ ಉತ್ಸಾಹದಿಂದ ಹೊಸ ಪ್ರಯೋಗಗಳನ್ನು ಮಾಡಬಹುದು ಎಂದು ಶಾರುಖ್ ಹೇಳಿದ್ದಾರೆ.

ಕೇವಲ ಗಿಮಕ್ ಮಾಡಿ ರಜನಿ ಅವರ ಹೆಸರು ಕೆಡಿಸಿ, ಲಾಭ ಪಡೆಯುವ ದುರ್ಬುದ್ಧಿ ನನ್ನಲ್ಲಿಲ್ಲ. ರಜನಿ ಅವರಿರುವ ದೃಶ್ಯದ ಕ್ಲಿಪ್ಪಿಂಗ್ ಶೀಘ್ರವೇ ಟಿವಿಗಳಲ್ಲಿ ಪ್ರಸಾರವಾಗಲಿದೆ. ನಮ್ಮ ಚಿತ್ರದಲ್ಲಿ ರಜನಿ ಅವರಿಗೆ ಯಾವ ಸ್ಥಾನ ಕಲ್ಪಿಸಿದ್ದೆವೇ ಎಂದು ಕ್ಲಿಪ್ಪಿಂಗ್ ನೋಡಿದ ಮೇಲೆ ವೀಕ್ಷಕರೇ ನಿರ್ಧರಿಸಬಹುದು ಎಂದು ಶಾರುಖ್ ಹೇಳಿದ್ದಾರೆ. ಅ.26ರಂದು ವಿಶ್ವದೆಲ್ಲೆಡೆ ರಾ.ಒನ್ ಚಿತ್ರ ತೆರೆಕಾಣಲಿದೆ.

English summary
The Baadshah of Bollywood, who was recently in Chennai for Ra One movie promotion and seeks Rajini's blessings for the film. Rajini is is essaying the cameo of the Endhiran role in Shahrukh's much-anticipated film Ra.One, which is slated to release on 26th October.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada