»   » ಚಿರಯೌವನ್ನಿಗ ದೇವಾನಂದ್ ಯುಗ ಅಂತ್ಯ

ಚಿರಯೌವನ್ನಿಗ ದೇವಾನಂದ್ ಯುಗ ಅಂತ್ಯ

Posted By:
Subscribe to Filmibeat Kannada
evergreen-actor-dev-anand-passes-away
ಲಂಡನ್: ಬಾಲಿವುಡ್ ನ 'Evergreen Superstar' ದೇವಾನಂದ್ ಯುಗ ಅಂತ್ಯ. ಭಾರತೀಯ ಸಿನಿಮಾ ರಂಗದಲ್ಲಿ ದಂತಕತೆಯಾಗಿದ್ದ ದೇವಾನಂದ್ ಚಿಕಿತ್ಸೆಗೆಂದು ಲಂಡನ್ನಿಗೆ ತೆರಳಿದವರು ಅಲ್ಲೇ ಶನಿವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ 88 ವರ್ಷದ ದೇವಾನಂದ್ ಚಿಕಿತ್ಸೆಗೆಂದು ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದರು ದೇವಾನಂದ್ ಪುತ್ರ ಸುನಿಲ್ ತಿಳಿಸಿದ್ದಾರೆ. ದೇಶ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ 'ಹಮ್ ಏಕ್ ಹೈ' ಎನ್ನುವ ಮೂಲಕ 1947ರಲ್ಲಿ ಬಾಲಿವುಡ್ ಪ್ರವೇಶಿದ್ದರು. ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮರುಘಳಿಗೆಯಲ್ಲೇ 'ಜಿದ್ದಿ' ಸಿನಿಮಾ ಮೂಲಕ ಭದ್ರವಾಗಿ ತಳವೂರಿದ ದೇವಾನಂದ್ ಹಿಂದುರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಚಿತ್ರರಸಿಕರ ಮನದಾಳದಲ್ಲಿ ಶಾಶ್ವತವಾಗಿ ಅದ್ಭುತ ಕಲಾವಿದನ ಸಾಸಹಗಳು ಒಂದೇ ಎರಡೇ... ಕನ್ನಡಿಗ ಆರ್ ಕೆ ನಾರಾಯಣ್ ಅವರ 'ಗೈಡ್' ಎಂಬ ಸರಳ ಕಥೆಯನ್ನು ಅದ್ಭುತ ದೃಶ್ಯಕಾವ್ಯವಾಗಿಸಿದ ಹೆಗ್ಗಳಿಕೆಯ ಜತೆಗೆ ಪೇಯಿಂಗ್ ಗೆಸ್ಟ್, ಜ್ಯೂವೆಲ್ ಥೀಫ್, ಸಿಐಡಿ, ಜಾನಿ ಮೇರಾ ನಾಮ್, ಅಮೀರ್ ಗರೀಬ್, ಹರೆ ರಾಮ ಹರೆ ಕೃಷ್ಣ, ದೇಸ್ ಪರದೇಸ್ ಅಂತಹ ಸೂಪರ್ ಚಿತ್ರಗಳನ್ನು ನೀಡಿದ್ದಾರೆ.

ಭಾರತದ ಚಿತ್ರ ರಂಗಕ್ಕೆ ಅವರಯು ಸಲ್ಲಿಸಿದ ಮಹೋನ್ನತ ಕೊಡುಗೆಗಾಗಿ 2001ರಲ್ಲಿ ಪದ್ಮ ಭೂಷಣ ಮತ್ತು 2002ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 1949ರಲ್ಲಿ 'ನವಕೇತನಮ್ ಇಂಟರ್ ನ್ಯಾಷನಲ್ ಫಿಲಂಸ್' ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ ದೇವಾನಂದ ಸುಮಾರು 35 ಕ್ಕೂ ಹೆಚ್ಚು ಸಿನಿಮಾಗಳನ್ನು ನೀಡಿದ್ದರು.

English summary
Dev Anand, the 'Evergreen Romantic Superstar' of Indian cinema, has passed away in London last night (Dec 3) following cardiac arrest. He was 88. Dev Anand, who had come here for medical check up, was not keeping well for the last few days. His son Sunil was with him when he breathed last.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada