For Quick Alerts
ALLOW NOTIFICATIONS  
For Daily Alerts

ಬಾಲಿವುಡ್ ನ ಬಹು ಜನಪ್ರಿಯ ಪ್ರೇಮ ಪರಸಂಗಗಳು

By Srinath
|

ಬಾಲಿವುಡ್ ನ ಹೆಸರಾಂತ ಪ್ರೇಮ ಪರಸಂಗಗಳನ್ನು ಹಾಗೇ ಸುಮ್ಮನೆ ನೆನಪಿಸಿಕೊಂಡಾಗ ಫಲ ನೀಡದ ಕೆಲವು ಜೋಡಿಗಳು ತಕ್ಷಣಕ್ಕೆ ಕಣ್ಣಿಗೆ ರಾಚುತ್ತವೆ. ಪ್ರೀತಿಯ ಆಳಕ್ಕಿಳಿದಾಗ ನೂರಾರು ಸಿಗಬಹುದು. ಆದರೂ ಪ್ರಮುಖವಾಗಿ ಹೇಳುವುದಾದರೆ ...

1. ಸಲ್ಮಾನ್ ಖಾನ್-ಐಶ್ವರ್ಯ ರೈ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ವಿಪರೀತವಾಗಿ ಪ್ರೇಮದ ಘಾಟು ಹರಡಿದ್ದು ಇದೇ ಜೋಡಿ ಎನ್ನಬಹುದು. ಆಶ್-ಸಲ್ಲು ಲವ್ ಸ್ಟೋರಿ ಸ್ವತಃ ಬಾಲಿವುಡ್ ನ ಯಾವುದೇ ಮಸಾಲಾ ಸಿನಿಮಾಕ್ಕಿಂತ ಕಡಿಮೆಯಿಲ್ಲ! ಕನಸಿನ ಕಥಾನಕ ಹೀಗೆ ಸಾಗುತ್ತದೆ ... ಮಿಸ್ ವರ್ಲ್ಡ್ - ಮಿಸ್ಟರ್ ಹ್ಯಾಂಡ್ ಸಮ್ ಮುಲಾಖತ್ ನೊಂದಿಗೆ ಆರಂಭ. ನಂತರ ಓತಪ್ರೋತ ಪ್ರೇಮ. ಕೊನೆಗೆ ಆಂಟಿ ಕ್ಲೈಮ್ಯಾಕ್ಸ್. ನಾಯಕ-ನಾಯಕಿ ಇಬ್ಬರೂ ಬೇರ್ಪಟ್ಟು ಜೀವನದಲ್ಲಿ ಸುಖವಾಗಿರಲು ನಿಶ್ಚಯಿಸುತ್ತಾರೆ.

ಈ ಮಧ್ಯೆ, ವಿವೇಕ್ ಒಬೇರಾಯ್ ಮತ್ತು ಅಭಿಷೇಕ್ ಬಚ್ಚನ್ ಬಂದು ಹೋಗುತ್ತಾರಾದರೂ ಅಭಿ ದೃಢವಾಗಿ ಐಶ್ ಬೇಬಿ ಜತೆ ನಿಲ್ಲುತ್ತಾನೆ. ಇನ್ನು, ಸಲ್ಲು ಮಿಯಾ ಕತ್ರಿನಾ ಕೈಫ್ ಜತೆಯಾಗುತ್ತಾನೆ.

2. ರವೀನಾ ಟಂಡನ್-ಅಕ್ಷಯ್ ಕುಮಾರ್: ಒಂದಾನೊಂದು ಕಾಲದಲ್ಲಿ ಎಂಬಂತೆ ಈ ಜೋಡಿಯ ಕಥೆ ಸಾಗುತ್ತದೆ. ಇದನ್ನು ಶಿಲಾಯುಗದ ಅಮಿತಾಭ್ ಮತ್ತು ರೇಖಾ ನಡುವಣ ರೊಮ್ಯಾನ್ಸ್ ನಷ್ಟು ಹಿಂದಕ್ಕೆ ಕೊಂಡೊಯ್ಯಬಹುದು. ರವೀನಾ-ಅಕ್ಷಯ್ ಜೋಡಿ ಪ್ರೇಮದಾಟದ ವೇಳೆ ಗಾಸಿಪ್ ಗುತ್ತಿಗೆದಾರರು ಅಹರ್ನಿಶಿ ದುಡಿದರು. ಜೋಡಿ ವಿಮುಖಾಗುತ್ತಿದ್ದಂತೆ ಇವರೆಲ್ಲ ಕೆಲಸವಿಲ್ಲದ ಬಡಗಿಗಳಾದರು.

3. ಅಭಿಷೇಕ್ ಬಚ್ಚನ್-ಕರಿಶ್ಮಾ ಕಪೂರ್: ಈ ಜೋಡಿ ನಿಕ್ಕಿಯಾದಾಗ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ತಣ್ಣಗೆ 60ರ ಬರ್ತ್ ಡೆ ಆಚರಿಸಿಕೊಳ್ಳುತ್ತಿದ್ದರು. 'ಚಿನ್ನದಂತ ಜೋಡಿ' ಎಂಬ ಅಭಿದಾನವೂ ಪ್ರಾಪ್ತವಾಗಿತ್ತು. ಆದರೂ ಜೋಡಿ ಯಾಕೆ ಪರಸಂಗ ಬಯಸಿತೋ ಇಂದಿಗೂ ಗುಪ್ತ್ ಗುಪ್ತ್. ಮುಂದೆ ಐಶ್ವರ್ಯ ರೈ ಎಂಬ ಮಂಗಳೂರಿನ ಕುಡಿ ಪ್ರಾಪ್ತಿಯಾಗುವವರೆಗೂ ಅಭಿ ದೇವದಾಸನಂತೆ ಅಭಿಜಾತ ಕಲಾವಿದನಾಗಿದ್ದ.

4. ಅಕ್ಷಯ್ ಕುಮಾರ್-ಶಿಲ್ಪಾ ಶೆಟ್ಟಿ: ಅಕ್ಷಯ್ ಕುಮಾರ್ ಬಾಲಿವುಡ್ ನಲ್ಲಿ ಉತ್ತುಂಗದಲ್ಲಿದ್ದಾಗ ರೊಮಾನ್ಸ್ ಗೆ ವಿಷಯದಲ್ಲಿ ಮೊಹಮದ್ ಘಜನಿ ಆಗಿದ್ದ. ರವೀನಾಳಿಂದ ಬೇರ್ಪಟ್ಟನಂತರ ಶಿಲ್ಪಾಗೆ ಅಕ್ಕಿ ಕಾಳು ಹಾಕಿದ್ದ. ಅವಳಿಗೋ ಆ ಕಾಳೇ ಬೃಹತ್ತಾಗಿ ಕಂಡಿತ್ತು. ಸುಮಾರು ಕಾಲ ಭರ್ಜರಿ ಬೇಟೆಯಾಡಿದ ಜೋಡಿ ಕೊನೆಗೆ ತಣ್ಣಗಾಯಿತು.

5. ಅಮೀರ್ ಖಾನ್-ರೀನಾ: ಚಾಕೊಲೇಟ್ ಹೀರೊ ಅಮೀರ್ ಮತ್ತು ರೀನಾ ನಡುವಣ ಪ್ರೀತಿ 'ಖಯಾಮತ್ ಸೆ ಖಯಾಮತ್ ತಕ್' ನದ್ದಾಗಿತ್ತು. ಜೋಡಿ ಮದ್ವೆನೂ ಆಗಿ, ಜುನೇದ್ ಮತ್ತು ಇರಾ ಎಂಬಿಬ್ಬರು ಮಕ್ಕಳನ್ನೂ ಪಡೆಯಿತು. ಆದರೆ ಬ್ರೇಕ್ ಕೆ ಬಾದ್ ಕಿರಣ್ ರಾವ್ ಲಗಾನ್ ತಂಡದೊಂದಿಗೆ ಅಮೀರ್ ರಿಯಲ್ ಲೈಫ್ ನಿರ್ದೇಶನಕ್ಕಿಳಿದಳು.

6. ಶಾಹೀದ್ ಕಪೂರ್-ಕರೀನಾ ಕಪೂರ್: ಈ ಸುವಿಖ್ಯಾತ ಜೋಡಿಗಾಗಿ ಆಧುನಿಕ ಪ್ರಚಾರ ಸಾಮಗ್ರಿಗಳೆಲ್ಲವೂ ಬಳಕೆಯಾಗಿದೆ. ಪತ್ರಿಕೆ, ಟಿವಿ, ನೆಟ್, ಎಂಎಂಎಸ್ ವಗೈರೆ. ಕೊನೆಗೆ, ಯೆ ಇಶ್ಕ್ ಹಾಯ್ ... ಎಂಬ ಕಹಿ ನೆನಪು. ಪ್ರೇಮ ಪಾರಿವಾಳಗಳು ದೂರವಾದಾಗ ಉಳಿಯುವುದೇ ಕಹಿ ಭಾವನೆಗಳು, ಏನಂತೀರಿ!?

English summary
Bollywood Masala: True to its colors there are any number of love stories and break ups in Bollywood. From Madhubala-Dilipkumar to Shaheed Kapoor-Karina Kapoor we get to read them all. They say love is blind, so lets learn braille, baby!

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more