»   » ಅಬ್ಬಾಸ್ ಹೆಂಡತಿಗೆ ಜಾನ್ ಅಬ್ರಹಾಂ ಚುಂಬನ

ಅಬ್ಬಾಸ್ ಹೆಂಡತಿಗೆ ಜಾನ್ ಅಬ್ರಹಾಂ ಚುಂಬನ

Posted By:
Subscribe to Filmibeat Kannada

ಸಾಲು ಸಾಲು ಚಿತ್ರಗಳು ತೋಪೆದ್ದ ಬಳಿಕ ಬಾಲಿವುಡ್ ನಟ ಜಾನ್ ಅಬ್ರಹಾಂ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮರುಭೂಮಿಯಲ್ಲಿ ಓಯಸಿಸ್ಸಿನಂತೆ ಚಿತ್ರವೊಂದು ಹುಡುಕಿಕೊಂಡು ಬಂದಿದೆ. ಚಿತ್ರದ ಹೆಸರು '1-800-Love'. ನಿರ್ದೇಶನ ಅಬ್ಬಾಸ್ ಟೈರವಾಲಾ. ಚಿತ್ರದ ನಾಯಕಿ ನಿರ್ದೇಶಕನ ಹೆಂಡತಿ ಪಖಿ. ಚಿತ್ರಕತೆಯನ್ನು ಸ್ವತಃ ಆಕೆಯೇ ಹೆಣೆದಿದ್ದಾರೆ.

ಜಾನ್ ಅಬ್ರಹಾಂ ಮೇಲೆ ಅದೇನು ಪ್ರೀತಿಯೋ ಏನೋ ಆತನಿಗೆಂದೇ ಈ ಲವ್ ಸ್ಟೋರಿಯನ್ನು ಪಖಿ ಬರೆದಂತಿದೆ. ಚಿತ್ರದಲ್ಲಿ ಸೂಪರ್ ಡೂಪರ್ ಆಗಿರುವ ಡಿಫರೆಂಟ್ ಸೀನ್ ಗಳು, ತಿರುವುಗಳು, ಮಸಾಲೆ ಎಲ್ಲವೂ ಇವೆಯಂತೆ.ಅದರಲ್ಲೂ ಚಿತ್ರದ ಐದು ಕಿಸ್ಸಿಂಗ್ ಸೀನ್ ಗಳು ಮಾತ್ರ ಸಖತ್ ಹಾಟ್ ಎನ್ನುತ್ತಾರೆ ನಿರ್ದೇಶಕರು.

ಪತಿ ಸ್ಟಾರ್ಟ್ ಕ್ಯಾಮೆರಾ ಆಕ್ಷನ್ ಎನ್ನುತ್ತಿದ್ದರೆ ಪತ್ನಿ ಫಕಿ ಮಾತ್ರ ಕಿಸ್ಸಿಂಗ್ ಸೀನ್ ಗಳನ್ನು ಎಂಜಾಯ್ ಮಾಡಿದರಂತೆ. ಆದರೆ ಜಾನ್ ಅಬ್ರಹಾಂ ಮಾತ್ರ ಇಂಗುತಿಂದ ಮಂಗನಂತೆ ಇದ್ದ ಎಂಬುದು ಸುದ್ದಿ. ಕಡೆಗೆ ನಿರ್ದೇಶಕ ಅಬ್ಬಾಸ್ ಧೈರ್ಯ ತುಂಬಿರಂತೆ. "ಪಖಿ ಸೆಟ್ಸ್ ನಲ್ಲಿ ನನ್ನ ಹೆಂಡತಿಯಲ್ಲ, ನಾಚಿಕೆ ಬಿಟ್ಟು ಗೋ ಅಹೆಡ್ ಲಾಕ್ ದ ಲಿಪ್ಸ್" ಎಂದು ಅಬ್ಬಾಸ್ ಅಬ್ಬರಿಸಿದ್ದೆ ತಡಜಾನ್ ಅಬ್ರಹಾಂ ತುಟಿಗಳು ತುಂಬಿಬಂದವಂತೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada