»   » ಮೊದಲ ವಾರ ರಾಜ್ ನೀತಿ ಭರ್ಜರಿ ಗಳಿಕೆ

ಮೊದಲ ವಾರ ರಾಜ್ ನೀತಿ ಭರ್ಜರಿ ಗಳಿಕೆ

Posted By:
Subscribe to Filmibeat Kannada

ನಾನಾ ಪಾಟೇಕರ್ , ಮನೋಜ್ ಬಾಜ್ ಪೇಯಿ, ರಣಭೀರ್ ಕಪೂರ್ , ಕತ್ರಿನಾ ಕೈಫ್ , ಅರ್ಜುನ್ ರಾಮ್ ಪಾಲ್ , ಅಜಯ್ ದೇವಗನ್ ,  ಮತ್ತು ನಾಸಿರುದ್ದೀನ್ ಶಾ ಹೀಗೆ ಪ್ರತಿಭಾವಂತರ ಸಮೂಹವನ್ನೇ ಹೊಂದಿರುವ ರಾಜ್ ನೀತಿ ಚಿತ್ರ ಕಳೆದ ವಾರ ವಿಶ್ವದಾದ್ಯಂತ 2,200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಮೊದಲ ವಾರವೇ ಒಟ್ಟು 62 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿದೆ.

ಮಹಾಭಾರತದ ದಾಯಾದಿ ಮತ್ಸರ, ಗಾಡ್ ಫಾದರ್ ಚಿತ್ರದ ಛಾಯೆ ಇದೆಯಾದರೂ ಭಾರತದ ರಾಜಕೀಯ ವ್ಯವಸ್ಥೆಯ ಕಥೆ ಹೊಂದಿರುವ ಚಿತ್ರದ ಅದ್ಬುತ ಯಶಸ್ಸು ನಿರ್ದೇಶಕ ಪ್ರಕಾಶ್ ಝಾ, ಮತ್ತು ವಿತರಕ ಯುಟಿವಿ ಮೋಷನ್ ಪಿಕ್ಚರ್‍ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರ್ಥ್ ರಾಯ್ ಕಪೂರ್ ಗೆ ಸಂತಸ ತಂದಿದೆ.

ಭಾರತದಲ್ಲಿ ಜನತೆಯ ಪ್ರತಿಕ್ರಿಯೆ ನಿರೀಕ್ಷಿತವೇ ಆಗಿದ್ದು, ಹೊರ ರಾಷ್ಟ್ರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದ್ದಾಗಿದೆ ಎಂದು ನಿರ್ದೇಶಕ ಝಾ ಹೇಳುತ್ತಾರೆ.

ಅಮೇರಿಕಾದಲ್ಲಿ ಮೊದಲ ವಾರ ಚಿತ್ರ 1 ಮಿಲಿಯನ್ ಡಾಲರ್ ಗಳಿಸಿದ್ದು, ಆಸ್ಟ್ರೇಲಿಯಾದಲ್ಲಿ ಈ ತನಕ ಬಿಡುಗಡೆಯಾದ ಯಾವುದೇ ಭಾರತೀಯ ಚಿತ್ರಕ್ಕಿಂತ ಹೆಚ್ಚಿನ ಗಳಿಕೆ ದಾಖಲಿಸಿದೆ. ಇಂಗ್ಲೆಂಡ್ ಮತ್ತು ಗಲ್ಫ್ ರಾಷ್ಟ್ರಗಳಲ್ಲೂ ಚಿತ್ರ ಉತ್ತಮ ಗಳಿಕೆ ಮಾಡುತ್ತಿದೆ.

ವಿದೇಶಗಳಲ್ಲಿನ 300 ಚಿತ್ರ ಮಂದಿರಗಳಿಂದ ಮೊದಲ ವಾರದ ಗಳಿಕೆ 10.5 ಕೋಟಿ ರೂಪಾಯಿಗಳಾಗಿವೆ. ಅಮೇರಿಕಾದಲ್ಲಿನ ಗಳಿಕೆ 9,16,446 ಡಾಲರ್ ಗಳಾಗಿದ್ದು, ಇಂಗ್ಲೆಂಡ್ ನ ಗಳಿಕೆ 3,15,408 ಡಾಲರ್ ಗಳಾಗಿದೆ.

ಗಲ್ಫ್ ನ ಕಲೆಕ್ಷನ್ 5 ಲಕ್ಷ ಡಾಲರ್ ಗಳಾಗಿವೆ. 3 ಈಡಿಯಟ್ಸ್ ನಂತರ ಬಿಡುಗಡೆಯಾದ ವಾರದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಕೀರ್ತಿ ರಾಜ್ ನೀತಿ ಚಿತ್ರಕ್ಕೆ ಸಲ್ಲುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada