»   » ಕಸಿ ಮಾಡಿದ ಸ್ತನಗಳಿಗೆ ರಾಖಿ ಸಾವಂತ್ ಗುಡ್ ಬೈ!

ಕಸಿ ಮಾಡಿದ ಸ್ತನಗಳಿಗೆ ರಾಖಿ ಸಾವಂತ್ ಗುಡ್ ಬೈ!

Subscribe to Filmibeat Kannada

ಬಾಲಿವುಡ್ ನ ಐಟಂ ಗರ್ಲ್ ರಾಖಿ ಸಾವಂತ್ ಅತ್ಯಾಕರ್ಷಕವಾಗಿ ಕಾಣಲು ಈ ಹಿಂದೆ ತನ್ನ ಸ್ತನಗಳ ಕಸಿ ಮಾಡಿಕೊಂಡಿದ್ದರು.ಇದೀಗ ಆಕೆ ಕಸಿ ಮಾಡಿಸಿಕೊಂಡಿರುವ ಸ್ತನಗಳನ್ನು ತೆಗೆಸಿ ಶೇ.100ರಷ್ಟು ನೈಸರ್ಗಿಕವಾಗಿದ್ದಾರೆ! ಇದೀಗ ತಾನು ನೈಸರ್ಗಿಕ ಸ್ತನಗಳ ಒಡತಿ ಎಂದು ರಾಖಿ ಎದೆಯುಬ್ಬಿಸಿ ಹೇಳುತ್ತಿದ್ದಾರೆ.

ಮಲಗುವಾಗ, ನೃತ್ಯ ಮಾಡುವಾಗ ಕಸಿ ಮಾಡಿದ ಸ್ತನಗಳಿಂದ ತೊಂದರೆಯಾಗುತ್ತಿತ್ತು. ಹಾಗಾಗಿ ನಾನು ಮತ್ತೆ ನೈಸರ್ಗಿಕ ಸ್ತನಗಳನ್ನ್ನು ಉಳಿಸಿಕೊಂಡಿದ್ದೇನೆ. ನಾನೇನು ಮುಖದ ಅಥವಾ ಇನ್ಯಾವುದೇ ಅಂಗದ ಕಸಿ ಮಾಡಿಸಿಕೊಂಡಿಲ್ಲ ಎನ್ನುತ್ತಾರೆ ರಾಖಿ.

ಇತ್ತೀಚೆಗೆ ರಾಖಿ 'ಪತಿ, ಪತ್ನಿ ಔರ್ ವೋ' ಎಂಬ ಕಾರ್ಯಕ್ರಮದ ಕೊನೆ ಕಂತಿನಲ್ಲಿ ಸ್ವಲ್ಪ ದಢೂತಿಯಾಗಿ ಕಾಣಿಸಿಕೊಂಡಿದ್ದರು. ಆದರೆ 'ಇಷ್ಕ್' ಎಂಬ ಚಿತ್ರದಲ್ಲಿ ಜೀರೋ ಸೈಜಿನ ಜೊತೆಗೆ ನೈಸರ್ಗಿಕ ಸ್ತನಗಳೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು.

ಯಾವುದೇ ಕಾರ್ಯಕ್ರಮವಿರಲಿ ಅದು ನಡೆಯುವಷ್ಟು ದಿನ ನಾನು ಊಟ, ತಿಂಡಿ ಬಿಟ್ಟು ಬಿಡುತ್ತೇನೆ. ಕೇವಲ ಹಣ್ಣಿನ ಪಾನೀಯಗಳನ್ನು ಮಾತ್ರ ಸೇವಿಸುತ್ತೇನೆ. 'ರಾಖಿ ಕಾ ಸ್ವಯಂವರ್' ಕಾರ್ಯಕ್ರಮದಲ್ಲೂ ನಾನು ತೆಳ್ಳಗೆ ಕಾಣಿಸಿದ್ದು ಈ ಕಾರಣಕ್ಕೆ. ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ಮತ್ತೆ ಸಿಕ್ಕಾಪಟ್ಟೆ ತಿನ್ನಲು ಶುರು ಮಾಡುತ್ತೇನೆ ಎನ್ನುತ್ತಾರೆ ರಾಖಿ ಸಾವಂತ್.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada