»   »  ಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ

ಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ

Posted By:
Subscribe to Filmibeat Kannada
Shah Rukhs house in Mumbai attacked
ಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ಬಂಗಲೆ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸೀಮೆ ಎಣ್ಣೆ ತುಂಬಿದ ಬಾಟಲಿಗಳನ್ನು ಶಾರುಖ್ ಬಂಗಲೆ ಕಡೆಗೆ ಎಸೆದು ಪರಾರಿಯಾಗಿದ್ದಾರೆ. ಘಟನೆ ಶುಕ್ರವಾರ ಮುಂಜಾನೆ 2.30 ಗಂಟೆಗೆ ನಡೆದಿದೆ.

ಘಟನೆಯಿಂದ ಗಾಬರಿಯಾದ ಶಾರುಖ್ ಖಾನ್ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ದುಷ್ಕರ್ಮಿಗಳು ಎಸೆದ ಬಾಟಲಿ ಮತ್ತಿತ್ತರ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಡೆಪ್ಯುಟಿ ಕಮೀಷನರ್ ನಿಕೇಟ್ ಕೌಶಿಕ್ ತಿಳಿಸಿದ್ದಾರೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.ಘಟನೆ ಸಂಭವಿಸಿದಾಗ ಶಾರುಖ್ ಮನೆಯಲ್ಲಿರಲಿಲ್ಲ. ದುಷ್ಕರ್ಮಿಗಳನ್ನು ಹಿಡಿಯಲು ಹಿಂಬಾಲಿಸಿದ ಶಾರುಖ್ ಭದ್ರತಾ ಸಿಬ್ಬಂದಿ ವಿಫಲರಾಗಿದ್ದಾರೆ. ಶಾರುಖ್ ಖಾನ್ ರ ಹೊಸ ಚಿತ್ರ 'ಬಿಲ್ಲೂ ಬಾರ್ಬರ್' ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

(ಏಜೆನ್ಸೀಸ್)

ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada