»   » ರಾಜ್ ಕುಂದ್ರಾ ಜೊತೆ ಆಲ್ಫ್ಸ್‌ಗೆ ಹಾರಿದ ಶಿಲ್ಪಾ ಶೆಟ್ಟಿ

ರಾಜ್ ಕುಂದ್ರಾ ಜೊತೆ ಆಲ್ಫ್ಸ್‌ಗೆ ಹಾರಿದ ಶಿಲ್ಪಾ ಶೆಟ್ಟಿ

Posted By:
Subscribe to Filmibeat Kannada

ಇನ್ನೇನು ಚೊಚ್ಚಲ ಹೆರಿಗೆ ನಿರೀಕ್ಷೆಯಲ್ಲಿರುವ ಕರಾವಳಿ ಕುಡಿ ಶಿಲ್ಪಾ ಶೆಟ್ಟಿ ರಜಾ ದಿನಗಳನ್ನು ಕಳೆಯಲು ಹಿತಕರವಾದ ಪ್ರದೇಶಕ್ಕೆ ಹಾರಿದ್ದಾರೆ. ತನ್ನ ಗಂಡ ರಾಜ್ ಕುಂದ್ರಾ ಜೊತೆ ಫ್ರಾನ್ಸ್‌ನ ಆಲ್ಪ್ಸ್ ಪ್ರದೇಶದಲ್ಲಿ ಶಿಲ್ಪಾ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಶಿಲ್ಪಾ ಏನೂ ಬಯಸಿರಲಿಲ್ಲವಂತೆ. ಸ್ವತಃ ರಾಜ್ ಕುಂದ್ರಾ ಅವರೇ ತಮ್ಮ ಪತ್ನಿಯನ್ನು ಆಲ್ಪ್ಸ್ ಪರ್ವತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ತಾಜಾ ಹವಾಮಾನ, ಕಣ್ಣಿಗೆ ಹಿತವಾದ ದೃಶ್ಯಗಳು, ಮನಸ್ಸಿಗೆ ಉಲ್ಲಾಸದಾಯಕ ವಾತಾವರಣದಲ್ಲಿ ಶಿಲ್ಪಾ ಕಾಲಕಳೆಯುತ್ತಿದ್ದಾರೆ. ಇವರೊಂದಿಗೆ ಮಾಧವನ್ ಹಾಗೂ ಆತನ ಪತ್ನಿ ಕೂಡ ಭೇಟಿಯಾಗಲಿದ್ದಾರೆ ಎನ್ನುತ್ತವೆ ಮೂಲಗಳು. ತನ್ನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿರುವ ಶಿಲ್ಪಾ ಶೆಟ್ಟಿ ಯೋಗಾಭ್ಯಾಸವನ್ನೂ ಮಾಡುತ್ತಿದ್ದಾರಂತೆ.

ಮೇ ತಿಂಗಳಾಂತ್ಯಕ್ಕೆ ಶಿಲ್ಪಾ ತನ್ನ ಚೊಚ್ಚನ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ ಎಂದು ರಾಜ್ ತಿಳಿಸಿದ್ದಾರೆ. ಅಭಿಮಾನಿಗಳಿಂದ ಈಗಾಗಲೆ ಶಿಲ್ಪಾಗೆ ಶುಭಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. (ಏಜೆನ್ಸೀಸ್)

English summary
Shilpa Shetty, who is heavily pregnant with her first baby, is enjoying her holiday with husband Raj Kundra at a ski resort in the French Alps. Raj Kundra has surprised his wife by taking her to Courchevel in the commune of Saint-Bon-Tarentaise in the French Alps.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X