For Quick Alerts
  ALLOW NOTIFICATIONS  
  For Daily Alerts

  ಇಂಟರ್ ನೆಟ್ ನಲ್ಲಿ ಅನುಷ್ಕಾ ಬಿಕಿನಿ ಚಿತ್ರ ಹರಿದಾಟ

  By Mahesh
  |

  ದಕ್ಷಿಣದಲ್ಲಿ ನಟಿಮಣಿಯರು ಬಿಕಿನಿ ತೊಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಉತ್ತರದಲ್ಲಿ ನಟಿಮಣಿಗಳಿಗೆ ಅವರ ವೆಬ್ ಅಭಿಮಾನಿಗಳೇ ಬಿಕಿನಿ ತೊಡಿಸುತ್ತಿದ್ದಾರೆ. ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ ನಂತರ ಈಗ ಬೆಂಗಳೂರು ಮೂಲದ ಅನುಷ್ಕಾ ಶರ್ಮ ಸರದಿ. ಬಿಕಿನಿ ತೊಟ್ಟ ಅನುಷ್ಕಾ ಶರ್ಮಾ ಚಿತ್ರ ಇಂಟರ್ ನೆಟ್ ನಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿದೆ. ಯಾರದೋ ದೇಹಕ್ಕೆ ಅನುಷ್ಕಾ ತಲೆ ಸೇರಿಸಿ ಮಾರ್ಫ್ ಮಾಡಿದ ಫೋಟೋ ಸೃಷ್ಟಿಸಿದ ಕುಹಕಿಗಳು ಬಾಲಿವುಡ್ ಬೆಡಗಿಗೆ ಕಿರಿಕಿರಿ ಉಂಟು ಮಾಡಿದ್ದಾರೆ.

  ಅಸಲಿ ಚಿತ್ರದ ತಲೆ ಮೇಲೆ ಹೊಡೆದಂತೆ ಈ ಚಿತ್ರ,ಈ ಹಿಂದೆ ಪ್ರಕಟವಾದ ಇತರೆ ನಟಿಯರ ಚಿತ್ರಗಳಿಗಿಂತ ಹೆಚ್ಚು ನೈಜತೆಯಿಂದ ಕೂಡಿರುವುದು ಇದರ ಜನಪ್ರಿಯತೆ ಕಾರಣವಿರಬಹುದು ಎಂದು ಖಾಸಗಿ ವೆಬ್ ವೊಂದು ಹೇಳಿದೆ. ಅನುಷ್ಕಾ ಬಿಕಿನಿ ಚಿತ್ರದ ಹಿಂದೆ ಜರ್ಮನ್ ಭಾಷೆ ಬೋರ್ಡ್ ಒಂದು ಕಾಣಿಸುತ್ತದೆ. ಈ ಚಿತ್ರದ ಮೂಲ ರೂಪದರ್ಶಿ ಹಾಗೂ ಸೃಷ್ಟಿಕರ್ತ ಯಾರು ಎಂದು ಇನ್ನೂ ತಿಳಿದು ಬಂದಿಲ್ಲ. ಸೆಕ್ಸಿ ಮೈಮಾಟದಲ್ಲಿ ನೆಚ್ಚಿನ ನಟಿಯರನ್ನು ಕಾಣುವ ಹೆಚ್ಚು ಕಲ್ಪನೆಯಿಂದ ಕಿಡಿಗೇಡಿಗಳು ಈ ರೀತಿ ಸುಳ್ಳು ಚಿತ್ರಗಳನ್ನು ಸೃಷ್ಟಿಸಿ, ವೆಬ್ ಸೈಟ್, ಫೋರಮ್ ಗಳಲ್ಲಿ ಸೇರಿಸಿ ಸಂಚಲನ ಉಂಟು ಮಾಡಿ ಸಂತೋಷಪಡುತ್ತಾರೆ.

  ಈ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹೋದರಿ ಇಸಾಬೆಲ್ಲಾ ವಿಡಿಯೋ ಕೂಡಾ ಸಾಕಷ್ಟು ಸುದ್ದಿ ಮಾಡಿತ್ತು. ವಿಡಿಯೋ ಬಗ್ಗೆ ಕಿಡಿಕಾರಿದ್ದ ಕತ್ರಿನಾ ತಾಯಿ ಸುಸಾನೆ ಟರ್ಕೊಟ್ಟೆ, ಮಾಧ್ಯಮಗಳ ಮುಂದೆ ಬಂದು ಕಿಡಿಗೇಡಿಗಳಿಗೆ ವಾಚಾಮಗೋಚರ ಬೈಯ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು.

  English summary
  After digital stripping of Sonakshi Sinha and Vidya Balan now pranksters targeted young actress Anushka Sharma. Morphed photographs of Anushka is hits internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X