»   » ಜಾನ್ ಅಬ್ರಾಹಂ ಏಷ್ಯದ ನಂ.1 ಕಾಮ ಪುರುಷ

ಜಾನ್ ಅಬ್ರಾಹಂ ಏಷ್ಯದ ನಂ.1 ಕಾಮ ಪುರುಷ

Posted By:
Subscribe to Filmibeat Kannada
john abraham
ಏಷ್ಯಾದ ನಂ.1 ಕಾಮಪುರುಷ(ಸೆಕ್ಸಿ ಪುರುಷ) ಎಂಬ ಪಟ್ಟವನ್ನು ಜಾನ್ ಅಬ್ರಹಾಂ ಗಳಿಸಿದ್ದಾರೆ.ಬ್ರಿಟನ್ ಮೂಲದ ಬ್ರಿಟಿಷ್ ಎಷ್ಯನ್ ವಾರಪತ್ರಿಕೆಯ ಸಮೀಕ್ಷೆಯ ಪ್ರಕಾರ ಜಾನ್ ಗೆ ಅತ್ಯಧಿಕ ಮತಗಳು ಸಿಕ್ಕಿವೆ. ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ನೀಲಿಕಂಗಳ ಹೃತಿಕ್ ರೋಷನ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಏಷ್ಯನ್ ವುವೆನ್ ಮ್ಯಾಗಜೀನ್, ಎಫ್ ಎಚ್ ಎಂ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರು ಕಾಮಪುರುಷರನ್ನು ಆಯ್ಕೆ ಮಾಡಿದರು. ಪದೇ ಪದೇ ಶರ್ಟ್ ಕಿತ್ತೆಸೆದು ಫೋಸ್ ಕೊಡುತ್ತಿದ್ದ ಸಲ್ಮಾನ್ ಗಿಂತ ಅವಶ್ಯ ವಿದ್ದಾಗ ಮಾತ್ರ ತನ್ನ ಮೈಕಟ್ಟನ್ನು ಪ್ರದರ್ಶಿಸುವ ಜಾನ್ , ಯುವತಿಯರಿಗೆ ಮೆಚ್ಚುಗೆಯಾಗಿದ್ದಾನೆ. ದೋಸ್ತಾನ ಚಿತ್ರದಲ್ಲಿ ಸಕತ್ ಹಾಟ್ ಆಗಿ ಕಾಣಿಸಿದ್ದು ಜಾನ್ ಪಾಲಿಗೆ ವರವಾಗಿ ಪರಿಣಮಿಸಿದೆ ಎನ್ನಲಾಗಿದೆ.

ಜಾನ್ ಅಬ್ರಹಾಂನ ಗೆಳತಿ ಬಿಪಾಶ ಬಸುಗೆ 2005 ಹಾಗೂ 2007 ರಲ್ಲಿ ಏಷ್ಯನ್ ಕಾಮಕನ್ಯೆ ಪ್ರಶಸ್ತಿ ಸಿಕ್ಕಿತ್ತು. ಈಗ ಜಾನ್ ಗೆ ಕಾಮಪುರುಷ ಪಟ್ಟ ಸಿಕ್ಕಿರುವುದರಿಂದ ಇಬ್ಬರದು ನಂ.1 ಸೆಕ್ಸಿ ಜೋಡಿ ಎನ್ನಲಡ್ಡಿಯಿಲ್ಲ. ಜಾನ್ ಜೊತೆಗೆ ಟಾಪ್ 10 ರ ಪಟ್ಟಿಯಲ್ಲಿದ್ದು ಸ್ಪರ್ಧೆನೀಡಿದವರು, ಹೃತಿಕ್ ರೋಷನ್, ಶಾರುಖ್ ಖಾನ್, ಅಲಿ ಜಫರ್, ಉಪೇನ್ ಪಟೇಲ್, ರಣಬೀರ್ ಕಪೂರ್ಮ್ ಸೈಫ್ ಅಲಿ ಖಾನ್, ಇಮ್ರಾನ್ ಖಾನ್, ಜಾನ್ ಸೀನ್ ಹಾಗೂ ಅಮೀರ್ ಖಾನ್.

ಸದ್ಯ 'ಹುಕ್ ಯಾ ಕ್ರುಕ್ 'ಎಂಬ ಕ್ರಿಕೆಟ್ ಆಧಾರಿತ ಚಿತ್ರದ ಚಿತ್ರೀಕರಣದಲ್ಲಿ ಜಾನ್ ತೊಡಗಿದ್ದಾರೆ. ಕ್ರಿಕೆಟ್ ನಾಯಕ ಧೋನಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಡೇವಿಡ್ ಧವನ್ ನಿರ್ದೇಶಿಸುತ್ತಿದ್ದಾರೆ. ಫುಟ್ಬಾಲ್ ಆಧಾರಿತ 'ಗೋಲ್' ಚಿತ್ರದ ನಂತರ ಜಾನ್ ಈಗ ಈ ಚಿತ್ರದಲ್ಲಿ ಬ್ಯಾಟ್ ಬೀಸಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada