For Quick Alerts
  ALLOW NOTIFICATIONS  
  For Daily Alerts

  ಹತ್ತು ನಿಮಿಷಕ್ಕೆ ಒಂದು ಕೋಟಿ ಒಲ್ಲೆ ಎಂದ ಕತ್ರಿನಾ

  By Rajendra
  |

  ಕೇವಲ ಹತ್ತೇ ಹತ್ತು ನಿಮಿಷದ ಕೆಲಸಕ್ಕೆ ರು.1 ಕೋಟಿ ಕೊಡ್ತೀವಿ ಎಂದರೂ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ನೋ ನೋ ಎಂದಿದ್ದಾರೆ! ಇನ್ನೂ 27ರ ಹರೆಯ ಈ ತಾರೆಗೆ ಕೇವಲ ಹತ್ತೇ ಹತ್ತು ನಿಮಿಷದಷ್ಟೂ ಸಮಯವಿಲ್ಲವಂತೆ. ಹಾಗಾಗಿ ಆಫರ್ ತಿರಸ್ಕರಿಸಿದ್ದಾರೆ.

  ಏನಿದು ಆಫರ್ ಅಂತೀರಾ? ಕೊಚ್ಚಿ ಫ್ಯಾಷನ್ ಶೋನಲ್ಲಿ ರ್‍ಯಾಂ ಪ್ ಮೇಲೆ ಕ್ಯಾಟ್ ವಾಕ್ ಮಾಡಬೇಕಾಗಿತ್ತಷ್ಟೇ. ಅದೂ ಕೇವಲ ಹತ್ತೇ ಹತ್ತು ನಿಮಿಷ. ಟೈಮಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ ಕತ್ರಿನಾ. ಸದ್ಯಕ್ಕೆ ಈಕೆ ಯಶ್ ಚೋಪ್ರಾ ಅವರ 'ಲಂಡನ್ ಇಷ್ಕ್' ಎಂಬ ಚಿತ್ರಕ್ಕೆ ಸಹಿಹಾಕಿದ್ದಾರೆ.

  ಮೊದಲೇ ದೊಡ್ಡ ಬ್ಯಾನರ್ ಚಿತ್ರ. ನಾಯಕ ನಟ ಶಾರುಖ್ ಖಾನ್. ಲಂಡನ್‌ನಲ್ಲಿ ಚಿತ್ರೀಕರಣ. ಇವೆಲ್ಲವನ್ನೂ ಬಿಟ್ಟು ಜುಜುಬಿ ರು.1 ಕೋಟಿಗೆ ಹೆಜ್ಜೆ ಹಾಕಲು ಸಾಧ್ಯವೆ? ಯಶ್ ಚೋಪ್ರಾ ಎಂದರೆ ಕೇಳಬೇಕೆ. ದುಡ್ಡು ಎಷ್ಟೇ ಕೋಟಿಗಳಾಗಲಿ ಚೆಲ್ಲಾಡುವ ಮನುಷ್ಯ. ಅಂದುಕೊಂಡಂತೆ ಚಿತ್ರ ಮೂಡಿಬರಬೇಕಷ್ಟೆ. (ಏಜೆನ್ಸೀಸ್)

  English summary
  Sources says that bollywood actress Katrina Kaif was offered a whopping amount of Rs 1 crore just to walk the ramp for 10 minutes at a fashion show event in Kochi on March 25. But the actress rejected the offer. Because she is busy in London Ishq is an upcoming romantic drama directed by Yash Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X