»   » ಉತ್ತರ ದಿಕ್ಕಿನೆಡೆಗೆ ಪಾದ ಬೆಳೆಸಿದ ಮರ್ಯಾದೆ ರಾಮಣ್ಣ

ಉತ್ತರ ದಿಕ್ಕಿನೆಡೆಗೆ ಪಾದ ಬೆಳೆಸಿದ ಮರ್ಯಾದೆ ರಾಮಣ್ಣ

Posted By:
Subscribe to Filmibeat Kannada

ಇಷ್ಟು ದಿನ ದಕ್ಷಿಣದಲ್ಲೇ ಸುತ್ತಾಡುತ್ತಿದ್ದ 'ಮರ್ಯಾದೆ ರಾಮಣ್ಣ' ಈಗ ಉತ್ತರ ದಿಕ್ಕಿನೆಡೆಗೆ ಪಾದ ಬೆಳೆಸಿದ್ದಾನೆ. ಇದು ತೆಲುಗಿನಲ್ಲಿ ತೆರೆಕಂಡು ಭಾರಿ ಯಶಸ್ಸು ದಾಖಲಿಸಿದ ರಾಮಣ್ಣನ ಕತೆ. ಅಲ್ಲಿಂದ ಅದನ್ನು ಕನ್ನಡಕ್ಕೆ ತರಲಾಗುತ್ತಿದ್ದು, 'ಕಳ್ ಮಂಜ' ಕೋಮಲ್ ರಾಮಣ್ಣನಾಗಲಿದ್ದಾರೆ . ಈಗ ಹಿಂದಿಗೆ ಮರ್ಯಾದೆ ರಾಮಣ್ಣ ರೀಮೇಕ್ ಆಗುತ್ತಿದೆ.

ಈಗಾಗಲೆ 'ರೆಡಿ' ಚಿತ್ರ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಮತ್ತಷ್ಟು ರೀಮೇಕ್ ಚಿತ್ರಗಳಿಗೆ ರೀಲು ಸುತ್ತಲು ಮುಂದಾಗಿದೆ. ಮರ್ಯಾದೆ ರಾಮಣ್ಣನಾಗಿ ಹಿಂದಿಯಲ್ಲಿ ಅಜಯ್ ದೇವಗನ್ ಕಾಣಿಸಲಿದ್ದಾರೆ. ಈ ಕಾಮಿಡಿ ಥ್ರಿಲ್ಲರ್ ಚಿತ್ರ ಅವರಿಗೆ ಸಖತ್ ಇಷ್ಟವಾಗಿದೆಯಂತೆ.

ಅಜಯ್ ದೇವಗನ್ ಒಂದು ಕಾಲು ಆಕ್ಷನ್‌ನಲ್ಲಿ ಮತ್ತೊಂದನ್ನು ಕಾಮಿಡಿಯಲ್ಲಿ ಇಟ್ಟಿರುವ ಕಾರಣ ಬ್ಯಾಲೆನ್ಸ್ ತಪ್ಪಿದ ಸೈಕಲ್‌ನಂತಾಗಿದ್ದಾರೆ. ಈಗ ಹೇಗಾದರೂ ಮಾಡಿ ಟ್ರ್ಯಾಕ್‌ಗೆ ಬರಬೇಕು ಎಂದು ಅಜಯ್ ಹವಣಿಸುತ್ತಿದ್ದಾರೆ. ಅವರ ಕಣ್ಣಿಗೆ ಈಗ ಮರ್ಯಾದೆ ರಾಮಣ್ಣ ಬಿದ್ದಿದ್ದಾನೆ. ಚಿತ್ರದ ನಾಯಕಿ ಕಾಜಲ್ ಅಗರವಾಲ್‌ ಎಂಬುದು ಸದ್ಯದ ಮಾಹಿತಿ. (ಏಜೆನ್ಸೀಸ್)

English summary
South Indias success movie Maryada Ramanna being remade in Hindi now.Ajay Devgn wants to remake this comedy thriller in Hindi.The same movie is remade in Kannada also. Sources says in Hindi Kajal Agarwal is the female lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada