For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್‌ಗೆ ಸಲ್ಮಾನ್ ಖಾನ್ ಬಿಎಂಡಬ್ಲ್ಯು ಗಿಫ್ಟ್

  By Rajendra
  |

  ನಟ ಸಲ್ಮಾನ್ ಖಾನ್‌ ಥೇಟ್ ನಮ್ಮ ಲೂಸ್ ಮಾದ ಯೋಗೇಶ್ ತರಹ ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲ ಎಂದು ಹಾಡುವುದೊಂದು ಬಾಕಿ ಇದೆ. ಇದಕ್ಕೆ ಕಾರಣವಾಗಿರುವುದು ಬಳುಕುವ ಬಳ್ಳಿ ಕರೀನಾ ಕಪೂರ್. ಈಕೆಗೆ ಭರ್ಜರಿ ಗಿಫ್ಟ್ ನೀಡಲು ಸಲ್ಲು ಮುಂದಾಗಿದ್ದಾನೆ.

  ಅದೇನಪ್ಪಾ ಅಂತಹ ಗಿಫ್ಟ್ ಅಂತೀರಾ. ಐಷಾರಾಮಿ ಕಾರೆಂದೇ ಕರೆಯುವ ಬಿಎಂಡಬ್ಲ್ಯು 7 ಸೀರೀಸ್‌ ಕಾರನ್ನು ಕೊಡಲು ಸಲ್ಲು ಸಿದ್ಧರಾಗಿದ್ದಾರೆ. ಯಾಕೆ ಅಂತೀರಾ? ಸಲ್ಲು ಮುಂದಿನ ಚಿತ್ರ 'ದಬಾಂಗ್ 2' ಚಿತ್ರದಲ್ಲಿ ಕರೀನಾ ಐಟಂ ಸಾಂಗ್ ಮಾಡಲು ಒಪ್ಪಿರುವುದೇ ಇದಕ್ಕೆ ಕಾರಣ. ಈಗಾಗಲೆ ಸಲ್ಲು ಸಹಾಯಕರು ಕಾರು ಆಯ್ಕೆಯಲ್ಲಿ ಬಿಜಿಯಾಗಿದ್ದಾರೆ.

  ಈ ಹಿಂದೆ ಸಲ್ಲು ಸಹೋದರ ಅರ್ಬಾಜ್ ಖಾನ್ 'ದಬಾಂಗ್ 2' ಐಟಂ ಸಾಂಗ್‌ಗಾಗಿ ಕರೀನಾರನ್ನು ಸಂಪರ್ಕಿಸಿದ್ದ. ಕಾಂಜಿ ಪಿಂಜಿ ಐಟಂ ಸಾಂಗ್ ಮಾಡಿದರೆ ನಾನು ಬಿಲ್ ಕುಲ್ ಬರಲ್ಲ. ಈ ಐಟಂ ಹಾಡಿಗೆ ಹೆಚ್ಚು ಪ್ರಚಾರ ನೀಡಬೇಕು. ಈ ಹಾಡು ನನ್ನ ಕೆರಿಯರ್‌ಗ್ರಾಫ್‌ನಲ್ಲಿ ಅಚ್ಚಳಿಯದೆ ಉಳಿಯಬೇಕು. ಹಾಗೆ ಹೀಗೆ ಮಣ್ಣು ಮಸಿ ಎಂದು ಷರತ್ತಿನ ಮೇಲೆ ಷರತ್ತುಗಳನ್ನು ಹಾಕಿದ್ದರು ಕರೀನಾ.

  ಇದರ ಜೊತೆಗೆ ಸಿಕ್ಕಾಪಟ್ಟೆ ಸಂಭಾವನೆಯನ್ನೂ ಕರೀನಾ ಕೇಳಿದ್ದರು. ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಅರ್ಬಾಜ್ ಖಾನ್ ಅಲ್ಲಿಂದ ಎದ್ದು ಬಂದಿದ್ದ. ಕಡೆಗೆ ಸಲ್ಲು ಅದು ಏನು ಮೋಡಿ ಮಾಡಿದನೋ ಏನೋ ಗೊತ್ತಿಲ್ಲ ಕಮಕ್ ಕಿಮಕ್ ಎನ್ನದೆ ಕರೀನಾ ಐಟಂ ಸಾಂಗ್‌ನ್ನು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್)

  English summary
  Salman Khan is very happy these days and the reason behind his happiness is none other than Kareena Kapoor. According to the reports, Salman is planning to gift Kareena a brand new car as Kareena Kapoor agreed to do an item number in his forthcoming film Dabangg 2

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X