For Quick Alerts
  ALLOW NOTIFICATIONS  
  For Daily Alerts

  ಜೂಹಿ ಚಾವ್ಲಾ ಜೊತೆ ಜಗಳವಾಗಿಲ್ಲ ಎಂದ ಶಾರುಖ್

  |

  ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ನಡುವೆ ಯಾವುದೇ ಜಗಳ ನಡೆದಿಲ್ಲವಂತೆ. ಹಾಗಂತ ಕಿಂಗ್ ಖಾನ್ ಶಾರುಖ್ ಅವಲತ್ತುಕೊಂಡಿದ್ದಾರೆ. ಕಾರಣ, ಮಾಧ್ಯಮಗಳು ಅವರಿಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎಂದು ಪದೇ ಪದೇ ಹೇಳುತ್ತಿದ್ದಾರಂತೆ. ಅದಕ್ಕೆ ಬಹಳಷ್ಟು ಬೇಸರ ಮಾಡಿಕೊಂಡಿದ್ದಾರೆ ಶಾರುಖ್.

  ಇವೆಲ್ಲಾ ಕೇವಲ ಮಾಧ್ಯಮಗಳ ಕಟ್ಟುಕತೆ. ನಮ್ಮಿಬ್ಬರ ಮಧ್ಯೆ ಯಾವುದೇ ಮನಸ್ತಾಪ, ಭಿನ್ನಾಭಿಪ್ರಾಯದ ಘಟನೆ ನಡದೇ ಇಲ್ಲ. ಅದ್ಯಾಕೆ ಮಾಧ್ಯಮಗಳು ನಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಕಲ್ಪಿಸಿಕೊಂಡು ಕಾದಂಬರಿ ಬರೆಯುತ್ತಾರೋ ಎಂದು ಪ್ರಶ್ನಿಸಿದ್ದಾರಂತೆ ಶಾರುಖ್.

  "ಅಷ್ಟೇ ಅಲ್ಲ, ಸಿನಿಮಾ ರಂಗಕ್ಕೆ ನಾನು ಹೊಸಬನಾಗಿ ಬಂದಾಗ ಜೂಹಿ, ಅವರಮ್ಮ ಹಾಗೂ ಸಹೋದರ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ನಾನು ತಪ್ಪಾಗಿ ನಡೆದುಕೊಂಡಾಗ ಕೂಡ ಜೂಹಿಯೇ ಕ್ಷಮಿಸಿ ಬುದ್ದಿ ಹೇಳಿದ್ದಾರೆ. ಹೀಗಿದ್ದೂ ನಮ್ಮಿಬ್ಬರಲ್ಲಿ ಮನಸ್ತಾಪ ಬಂದಿದೆ ಎಂದರೆ ಹೇಗೆ?" ಎಂದು ಖಾರವಾಗಿದ್ದಾರಂತೆ ಶಾರುಖ್. (ಏಜೆನ್ಸೀಸ್)

  English summary
  Shahrukh Khan has brushed aside rumours of a fight between him and good friend Juhi Chawla.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X