»   » ಸ್ಲಂನಲ್ಲಿ ಖ್ಯಾತ ಸಂಕಲನಕಾರನ ದುರಂತ ಬದುಕು

ಸ್ಲಂನಲ್ಲಿ ಖ್ಯಾತ ಸಂಕಲನಕಾರನ ದುರಂತ ಬದುಕು

Posted By:
Subscribe to Filmibeat Kannada

ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಕಲನ ಮಾಡಿರುವ ಬಾಲಿವುಡ್‌ನ ಖ್ಯಾತ ಸಂಕಲನಕಾರ ಎಂ ಎಸ್ ಶಿಂಧೆ ಈಗ ಮುಂಬೈನ ಕೊಳಗೇರಿಯೊಂದರಲ್ಲಿ ಬದುಕು ದೂಡುತ್ತಿದ್ದಾರೆ. ಕಳೆದ ಆರು ತಿಂಗಳಿಂದಅವರ ವಿಳಾಸ ಜಗತ್ತಿನ ಅತಿದೊಡ್ಡ ಕೋಳಗೇರಿ ಧಾರಾವಿಗೆ(ಮುಂಬೈ) ಸ್ಥಳಾಂತರವಾಗಿದೆ. ನಿಜವಾದ ಬದುಕು ಜಟಕಾ ಬಂಡಿ ಇಲ್ಲಿದೆ ಓದಿ.

ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಾದ ಶೋಲೆ, ಸೀತಾ ಔರ್ ಗೀತಾ, ಸಾಗರ್ ಚಿತ್ರಗಳಿಗೆ ಸಂಕಲನಕಾರರಾಗಿ ಶಿಂಧೆ ಕೆಲಸ ಮಾಡಿದ್ದರು. 81ವರ್ಷದ ಶಿಂಧೆ ಹೇಗಾದರೂ ಮಾಡಿ ಈ ನರಕದಿಂದ ನನ್ನನ್ನು ಪಾರು ಮಾಡಿ ಎಂದು ಅಂಗಲಾಚಿದ್ದಾರೆ. ಅವರ ನರಕಸದೃಶ ಜೀವನಗಾಥೆಯನ್ನು ಇಂಗ್ಲಿಷ್ ದೈನಿಕ 'ಟೈಮ್ಸ್ ಆಫ್ ಇಂಡಿಯಾ' ಬೆಳಕಿಗೆ ತಂದಿದೆ.

"ನಾವು ವಾಸಿಸುತ್ತಿದ್ದ (48 ವರ್ಷಗಳಿಂದ ಅವರು ಅಲ್ಲೇ ವಾಸಿಸುತ್ತಿದ್ದರು) ಕಟ್ಟಡ ಕುಸಿದು ಬಿದ್ದ ಕಾರಣ ನಮ್ಮನ್ನು ಬಲವಂತವಾಗಿ ಇಲ್ಲಿಗೆ ಸ್ಥಳಾಂತರಿಸಲಾಯಿತು. ಕುಸಿದು ಬಿದ್ದ ಕಟ್ಟಡದ ಮಾಲೀಕನೂ ನಮಗೆ ಯಾವುದೇ ನೆರವು ನೀಡಲಿಲ್ಲ. ಬಳಿಕ ಮುಂಬೈ ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿ ಈಗಿರುವ 160 ಚದರ ಅಡಿಯ ಕೊಠಡಿಯನ್ನು ನೀಡಲಾಗಿದೆ."

ಆರ್ಥಿಕ ಹಾಗೂ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿರುವ ಶಿಂಧೆ ಅವರ ಬದುಕು ಮೂರಾ ಬಟ್ಟೆಯಾಗಿದೆ. ಅವರು ಕಣ್ಣಿನ ಪೊರೆ ತೆಗೆಸಲು ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ. ಯಾರಾದರೂ ಸಹಾಯ ಮಾಡುತ್ತಾರಾ ಎಂದು ಎದುರು ನೋಡುತ್ತಿದ್ದಾರೆ. ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಇವರನ್ನು ಬಾಲಿವುಡ್ ಸಂಪೂರ್ಣವಾಗಿ ಮರೆತಿರುವುದು ದುರಂತ.

ಶಿಂಧೆ ಅವರ ಪುತ್ರಿ ಅಚಲಾ ಸಂಕಲನಕಾರರ ಸಂಘಕ್ಕೆ ಮೊರೆಹೋಗಿದ್ದರು. ಕಳೆದ ವರ್ಷ ಅವರು ರು.5000 ಚೆಕ್ ಕೊಟ್ಟು ಕೈತೊಳೆದುಕೊಂಡಿದ್ದರು. ಬಳಿಕ ಸರಕಾರವಾಗಲಿ, ಚಿತ್ರೋದ್ಯಮವಾಗಲಿ ಶಿಂಧೆ ಮನೆ ಕಡೆಗೆ ಅಪ್ಪಿ ತಪ್ಪಿಯೂ ಸುಳಿದಿಲ್ಲ. ಯಾರಾದರೂ ಬಂದು ಸಹಾಯ ಮಾಡುತ್ತಾರಾ ಎಂದು ಈ ಹಿರಿಯ ಜೀವ ಎದುರು ನೋಡುತ್ತಿದೆ.

English summary
M S Shinde, the man who has edited over 100 hit films, including Sholay, Seeta Aur Geeta and Sagar, has been living in PMGP Colony, Dharavi, for the last six months. I want to get out of this place," said the 81 year old Shinde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada