»   »  ಬಾಲಿವುಡ್ ನಾಯಕಿಯರಿಗೆ ಕಿಮ್ಮತ್ತಿಲ್ಲ: ಬಿಪಶಾ

ಬಾಲಿವುಡ್ ನಾಯಕಿಯರಿಗೆ ಕಿಮ್ಮತ್ತಿಲ್ಲ: ಬಿಪಶಾ

Subscribe to Filmibeat Kannada
Heroines are never signed for sequels: Bipasha Basu
'ನಯನ' ಮನೋಹರ ಸುಂದರಿ ಬಿಪಾಶಾ ಬಸು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಅವರಿಗೇನು ಕಣ್ಣಿನ ತೊಂದರೆಯೇ? ಎಂದು ಕೇಳಬೇಡಿ. ''ಬಾಲಿವುಡ್ ನಲ್ಲೂ ಪುರುಷರಿಗೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ, ನಟಿಯರನ್ನು ಕಡೆಗಣಿಸಲಾಗುತ್ತಿದೆ. ನಾಯಕಿಯರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ'' ಎಂಬುದು ಅವರ ನಿದ್ದೆ ಕೆಡಲು ಕಾರಣವಾಗಿದೆ. ಹಾಗಾಗಿ ಕಣ್ಣು ಕೆಂಪಗಾಗಿದೆ ಅಷ್ಟೇ!

ಬಿಪಾಶಾ ಈ ಹಿಂದೆ ನಟಿಸಿದ್ದ 'ರಾಜ್'ಚಿತ್ರದ ಮುಂದಿನ ಭಾಗವಾಗಿ 'ರಾಜ್ 2' ಚಿತ್ರ ಬಂದಿತ್ತು. ರಾಜ್ ಚಿತ್ರದಲ್ಲಿ ಡಿನೋಮೋರಿಯಾ, ಬಿಪಾಶಾ ಜತೆಯಾಗಿ ನಟಿಸಿದ್ದರು. ರಾಜ್ 2 ಚಿತ್ರದಲ್ಲಿ ಅಧ್ಯಯನ್ ಸುಮನ್, ಇಮ್ರಾನ್ ಹಸ್ಮಿ, ಕಂಗನಾ ರನೌತ್ ಅಭಿನಯಿಸಿದ್ದರು. ಈಗ 'ರೇಸ್' ಚಿತ್ರದ ಮುಂದುವರಿದ ಭಾಗವಾಗಿ 'ರೇಸ್ 2' ಬರುತ್ತಿದೆ. ರೇಸ್ ಚಿತ್ರದಲ್ಲಿ ಬಿಪಾಶಾ ಬಸು ನಟಿಸಿದ್ದರು. ಈಗ ರೇಸ್ 2 ಚಿತ್ರಕ್ಕೆ ಅವರನ್ನು ಕೈಬಿಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಪಾಶಾ, ಹೇಳಿ ಕೇಳಿ ನಮ್ಮದು ಪುರುಷ ಪ್ರಧಾನ ಪ್ರಪಂಚ. ಇನ್ನು ನಟಿಯರಿಗೆ ಅವಕಾಶ ಕೊಡುವ ಮಾತೆಲ್ಲಿ. ಮುಂದುವರಿದ ಭಾಗಗಳಲ್ಲಿ ನಟರನ್ನು ಕೇಳಲಾಗುತ್ತದೆಯೇ ಹೊರತು ನಟಿಯರನ್ನು ಕೇಳುವುದಿಲ್ಲ. ಹೇಗಿದ್ದರೂ ನನಗೆ ಒಪ್ಪುವ ಪಾತ್ರಗಳು ಬರುತ್ತಿವೆ. ಈ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುತ್ತಾರೆ.

ರೇಸ್ ಚಿತ್ರದ ಸೀಕ್ವೆಲ್ ಚಿತ್ರವನ್ನು ತೆಗೆಯುತ್ತಾರೆ ಎಂಬುದು ನನಗೆ ಗೊತ್ತೇ ಇರಲಿಲ್ಲ. ಆ ಚಿತ್ರದ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ನನ್ನನ್ನು ಸಂಪರ್ಕಿಸಲೂ ಇಲ್ಲ. ಪ್ರಸ್ತುತ ಸಂಜಯ್ ದತ್, ಅಜಯ್ ದೇವಗಣ್ ರೊಂದಿಗೆ ಕಲೆತು 'ಆಲ್ ದಿ ಬೆಸ್ಟ್' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿದ್ದು ಇದೊಂದು ಪಕ್ಕಾ ಹಾಸ್ಯ ಚಿತ್ರ ಎನ್ನುತ್ತಾರೆ ಬಿಪಾಶಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಕ್ಷಯ್ ಜತೆ ನಟಿಸಲು ನಿರಾಕರಿಸಿದಅಸಿನ್!
ರಾಜ್ ಅಭಿಮಾನಿಯಾಗಿದ್ದ ಫಿರೋಜ್ ಖಾನ್
ಅಂತಿಂತ ಹೆಣ್ಣು ನಾನಲ್ಲ ಎನ್ನುತ್ತಿರುವ ತ್ರಿಶಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada