»   » ಬಿಪಾಶಾ ಮಾತಿಗೆ ಮೌನವೇ ಉತ್ತರ ಎಂದ ಜಾನ್

ಬಿಪಾಶಾ ಮಾತಿಗೆ ಮೌನವೇ ಉತ್ತರ ಎಂದ ಜಾನ್

Posted By:
Subscribe to Filmibeat Kannada

ಬಾಲಿವುಡ್ ನಟ, ಇತ್ತೀಚಿಗೆ ಮಂಗಳೂರಿನಲ್ಲಿ ಅಭಿಮಾನಿ ಹುಡುಗಿಯೊಬ್ಬಳಿಂದ ಕೈ ಕಚ್ಚಿಸಿಕೊಂಡ ಜಾನ್ ಅಬ್ರಹಾಂ, ಬಿಪಾಶಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ಅವರಾಡಿರುವ ಮಾತುಗಳೇ ಪ್ರತಿಕ್ರಿಯೆ ಅಂದುಕೊಳ್ಳಬಹುದು ಎಂಬುದು ವ್ಯಂಗವೆನಿಸಿದರೂ ಸತ್ಯ.

"ಜಾನ್ ಗೆ ವಯಸ್ಸಾಗುತ್ತಿದೆ. ಬೇಗ ಮದುವೆ ಮಾಡಿಕೊಳ್ಳುವುದು ಒಳ್ಳೆಯದು" ಎಂಬ ಬಿಪಾಶಾ ಸಲಹೆಗೆ ಜಾನ್ ಕ್ಯಾರೇ ಅನ್ನುತ್ತಿಲ್ಲ. ಬದಲಾಗಿ, ನಾನು ಇತ್ತೀಚಿಗೆ ಮಾದ್ಯಮದಲ್ಲಿ ಬರುವ ಆಗುಹೋಗುಗಳ ಸಮಾಚಾರಗಳ ಬಗ್ಗೆ ನಿಗಾ ವಹಿಸಿಲ್ಲ. ಹಾಗಾಗಿ, ನನಗೆ ಬಿಪಾಶಾ ಹೇಳಿಕೆಗಳ ಬಗ್ಗೆ ಗೊತ್ತಿಲ್ಲ. ಅಷ್ಟಕ್ಕೂ ನನಗೆ ಬಿಪಾಶಾ ಹೇಳಿಕೆಗಳ ಬಗ್ಗೆ ಯಾವುದೇ ಆಸಕ್ತಿಯಿಲ್ಲ" ಅಂದಿದ್ದಾರೆ.

ಜೊತೆಗೆ, "ನನ್ನ ಮದುವೆ ವೈಯಕ್ತಿಕ ವಿಷಯ. ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆಯನ್ನು ಮಾಧ್ಯಮದ ಮುಂದೆ ಬಯಲು ಮಾಡಲು ಬಯಸುವುದಿಲ್ಲ" ಎಂದಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಸುರಸುಂದರಾಂಗ ಜಾನ್ ಅಬ್ರಹಾಂ, ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ತುಂಬಾ 'ಸೇಫ್' ಆಗಿ ಆಟವಾಡುತ್ತಿದ್ದಾರೆ. (ಏಜೆನ್ಸೀಸ್)

English summary
John Abraham is unaware and ignorant about ex-girlfriend Bipasha Basu remarks about him to get married soon as he was getting old.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada