For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಜೊತೆ ಎಪ್ಪತ್ತು ವರ್ಷದ ವಿದ್ಯಾ ಬಾಲನ್

  |

  ಬಾಲಿವುಡ್ ಚಿತ್ರಜಗತ್ತಿನ ಸದ್ಯದ ಸೆನ್ಸೇಷನ್ ಸ್ಟಾರ್ ನಟಿ ವಿದ್ಯಾ ಬಾಲನ್ ಇದೀಗ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಎಂದಿನಂತೆ ಪಾತ್ರದ ಆಯ್ಕೆಯಲ್ಲಿ ಈಗಲೂ ವಿಭಿನ್ನತೆ ಮೆರೆದಿರುವ ವಿದ್ಯಾ, 70 ವರ್ಷದ ಮುದುಕಿಯ ಪಾತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಅದು ಸುಧೀರ್ ಮಿಶ್ರಾರ ಮುಂದಿನ ಚಿತ್ರ 'ಮೆಹ್ರುನೀಸಾ'.

  ಸದಾ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವ ನಿರ್ದೇಶಕ ಸುಧೀರ್ ಮಿಶ್ರಾ, ಈ ಬಾರಿ ಮಹಿಳಾ ಪ್ರಧಾನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ನಾಯಕಿಯಾಗಿ ವಿದ್ಯಾ ಬಾಲನ್ ರನ್ನು ಆಯ್ಕೆ ಮಾಡಿರುವ ಮಿಶ್ರಾ, ಪ್ರಮುಖ ಪಾತ್ರಗಳಿಗೆ ಅಮಿತಾಬ್ ಬಚ್ಚನ್ ಹಾಗೂ ರಿಷಿ ಕಪೂರ್ ಅವರನ್ನು ಸಹಾ ಕರೆತರಲಿದ್ದಾರೆ. ಈ ಚಿತ್ರದಲ್ಲಿ ವಿದ್ಯಾ, 70 ವರ್ಷದ ಮುದುಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ವಿದ್ಯಾರ ಅಭಿಮಾನಿಗಳು ಅವರನ್ನು 70 ವರ್ಷದ ಮುದುಕಿಯ ಪಾತ್ರದಲ್ಲಿ ನೋಡಲು ಬೇಸರ ವ್ಯಕ್ತಪಡಿಸಬಹುದೆಂಬ ಲೆಕ್ಕಾಚಾರದಲ್ಲಿ ನಿರ್ದೇಶಕರು ವಿದ್ಯಾರನ್ನು 20 ವರ್ಷದ ಹುಡುಗಿಯಿಂದ 70 ವರ್ಷದ ಮುದುಕಿಯ ಪಾತ್ರದವರೆಗೂ ತೋರಿಸಲಿದ್ದಾರಂತೆ. ಅಂದಹಾಗೆ, ಇದೀಗ ಬಿಡುಗಡೆಯಾಗಿರುವ ವಿದ್ಯಾರ 'ಕಹಾನಿ' ಚಿತ್ರ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದರ ಜತೆ ವಿದ್ಯಾ ನಟನೆ ಹೈಲೈಟ್ ಎನಿಸಿದೆ. (ಏಜೆನ್ಸೀಸ್)

  English summary
  Actress Vidya Balan's upcoming movie is Mehruneesa. It has Sudheer Mishra Direction and also has Amitabh Bchchan and Rishi Kapoor starer. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X