For Quick Alerts
  ALLOW NOTIFICATIONS  
  For Daily Alerts

  ಸುರಸುಂದರ ಜಾನ್ ಜೋಡಿ ಅಮ್ಮ ಐಶ್ವರ್ಯ ರೈ

  |

  ಮಾಜಿ ವಿಶ್ವಸುಂದರಿ, ಬಚ್ಚನ್ ಸೊಸೆ ಹಾಗೂ ಇತ್ತೀಚಿಗೆ ಹೆಣ್ಣುಮಗುವಿನ ತಾಯಿಯಾಗಿರುವ ಐಶ್ವರ್ಯಾ ರೈ ಬಚ್ಚನ್, ಮತ್ತೆ ಬಾಲಿವುಡ್ ಗೆ ಪ್ರವೇಶ ಪಡೆಯುವುದು ಯಾವಾಗ ಎಂಬುದು ಎಲ್ಲರಿಗೂ ಕುತೂಹಲದ ವಿಷಯ. ಅದಕ್ಕೀಗ ಉತ್ತರ ದೊರೆತಿದೆ. ಜಾನ್ ಅಬ್ರಹಾಂ ಜೊತೆ, ಇದೇ ಮೊದಲಬಾರಿಗೆ ಜೋಡಿಯಾಗಿ ಐಶ್ವರ್ಯ ರೈ ಮತ್ತೆ ಬಾಲಿವುಡ್ ಗೆ ಸದ್ಯದಲ್ಲೇ ಮರಳಲಿದ್ದಾರೆ.

  ನಿರ್ದೇಶಕ ಶ್ರೀರಾಮ್ ರಾಘವನ್ ನಿರ್ದೇಶಿಸಲಿರುವ 'ಹ್ಯಾಪಿ ಬರ್ತ್ ಡೇ' ಚಿತ್ರದಲ್ಲಿ ಐಶ್ ನಟಿಸಲಿದ್ದಾರೆ. ಜಾನ್ ಅಬ್ರಹಾಂ ಜತೆ ಐಶ್ವರ್ಯ ರೈ ಮೊದಲ ಬಾರಿಗೆ ನಟಿಸುತ್ತಿರುವುದು ಬಾಲಿವುಡ್ ಮಂದಿಗೆ ಆಶ್ಚರ್ಯದ ಸಂಗತಿ ಎನಿಸಿದೆಯಂತೆ. ಸದ್ಯಕ್ಕೆ ಸೈಫ್, ಕರೀನಾ ಜೋಡಿಯ 'ಏಜೆಂಟ್ ವಿನೋದ್' ಚಿತ್ರದಲ್ಲಿ ಬ್ಯುಸಿಯಾಗಿರುವ ಶ್ರೀರಾಮ್ ರಾಘವನ್, ಅದಾದನಂತರ ಈ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

  ಗೌರಂಗ್ ಜೋಶಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದು ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆಯಲು ಉತ್ಸುಕರಾಗಿದ್ದಾರೆ. ಈ ಮೊದಲೊಮ್ಮೆ ಜಾನ್ ಅಬ್ರಹಾಂ, "ನಾನು ಮತ್ತು ಐಶ್ವರ್ಯಾ ರೈ ಒಳ್ಳೆಯ ಜೋಡಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇವೆ" ಎಂದಿದ್ದರು. ಆ ಮಾತು ಈಗ ನಿಜವಾಗಿದೆ. ಒಟ್ಟಿನಲ್ಲಿ ತೆರೆಯ ಮೇಲೆ ಐಶ್-ಜಾನ್ ಜೋಡಿಯ ಮ್ಯಾಜಿಕ್ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. (ಏಜೆನ್ಸೀಸ್)

  English summary
  Aishwarya Rai Bachchan to make her Bollywood comeback post pregnancy and delivery with John Abraham in the film Happy Birthday.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X