»   » ಕೃಷ್ಣ ಸುಂದರಿ ಬಿಪಾಶಾ ಬಸುಗೆ ಬೆಂಗಳೂರು ಆಂಟಿ ಕಿಸ್

ಕೃಷ್ಣ ಸುಂದರಿ ಬಿಪಾಶಾ ಬಸುಗೆ ಬೆಂಗಳೂರು ಆಂಟಿ ಕಿಸ್

Posted By:
Subscribe to Filmibeat Kannada

ಬಾಲಿವುಡ್ ತಾರೆ, ಕೃಷ್ಣ ಸುಂದರಿ ಬಿಪಾಶಾ ಬಸುಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಟ್ಟ ಅನುಭವ ಎದುರಾಗಿದೆ. ಮಹಿಳೆಯೊಬ್ಬರು ಬಿಪಾಶಾರ ಕೆನ್ನೆಗೆ ಚುಂಬಿಸಲು ಪ್ರಯತ್ನಿಸಿದ ಘಟನೆ ಅದು.ಈ ಘಟನೆಯಿಂದ ಬಿಪಾಶಾ ಬಸು ಚೆಚ್ಚಿ ಬಿದ್ದಿದ್ದಾರೆ.

ಈ ಘಟನೆಯನ್ನು ಬಿಪಶಾ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನ ತಮ್ಮ ಖಾತೆಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ. "ಬೆಂಗಳೂರು ಏರ್ ಪೋರ್ಟ್ ಎಂಟ್ರನ್ಸ್ ನಲ್ಲಿ ತಮಾಷೆಯ ಸಂಗತಿಯೊಂದು ನಡೆಯಿತು! ಆಂಟಿಯೊಬ್ಬರು ನನ್ನನ್ನು ಬರಸೆಳೆದು ಮುತ್ತಿಕ್ಕಲು ಪ್ರಯತ್ನಿಸಿದರು. ಇನ್ನೇನು ಆಕೆಯ ತುಟಿ ನನ್ನ ಕೆನ್ನೆಗೆ ತಾಗಬೇಕು ಅಷ್ಟರಲ್ಲಿ ಅದು ಹೇಗೋ ಕಷ್ಟಪಟ್ಟು ಪಾರಾದೆ." ಎಂದಿದ್ದಾರೆ.

ಬಿಪಾಶಾ ಬಸುಗೆ ಈ ರೀತಿಯ ಸಿಹಿಕಹಿ ಅನುಭವ ಎದುರಾಗುತ್ತಿರುವುದು ಇದೇ ಮೊದಲಲ್ಲ. ಶ್ರೀಲಂಕಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲೂ ಹೀಗೆ ಆಗಿತ್ತು. ಹೋಟೆಲ್ ನ ಹೊರಗೆ ಪರಿಚಯಸ್ಥರಿಗೆ ಹಲೋ ಹೇಳುತ್ತಿದ್ದೆ. ಹುಡುಗಿಯೊಬ್ಬಳು ನನ್ನ ಕೈಹಿಡಿದು ಎಳೆದು ಬೆರಳನ್ನು ಕಚ್ಚಿದ್ದಳು. ಇದಕ್ಕಿಂತಲೂ ಇಂದಿನ ಆಂಟಿ ಘಟನೆ ಹೆಚ್ಚು ಭಯಭೀತಗೊಳಿಸಿತು ಎಂದು ಹೇಳಿದ್ದಾರೆ.

ಅಯ್ಯೋ ಅಷ್ಟೇನಾ, ಹೋಗ್ಲಿ ಬಿಡಿ ಆಂಟಿ ಬದಲು ಅಂಕಲ್ ಕಿಸ್ ಕೊಟ್ಟಿಲ್ಲವಲ್ಲ. ಅದಕ್ಕೆ ಸಮಾಧಾನಪಡಿ ಎಂಬುದು ಸಿನಿಕರ ಅಂಬೋಣ. ಹಿಂದೊಮ್ಮೆ ಕಿಡಿಗೇಡಿಯೊಬ್ಬ ಬಿಪಾಶಾ ಎದೆಗೆ ಕೈಹಾಕಿ ತಡವಿ ಪರಾರಿಯಾಗಿದ್ದ. ಆಗ ಬಿಪಶಾ ಇಷ್ಟು ಭಯಬಿದ್ದಿರಲಿಲ್ಲ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada