»   »  ನೀಲ್ ನಿತಿನ್ ಗೆ ಫೋನ್ ನಲ್ಲಿ ಸಲ್ಮಾನ್ ಖಾನ್ ಧಮಕಿ

ನೀಲ್ ನಿತಿನ್ ಗೆ ಫೋನ್ ನಲ್ಲಿ ಸಲ್ಮಾನ್ ಖಾನ್ ಧಮಕಿ

Subscribe to Filmibeat Kannada

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮೂಗಿನ ತುದಿಯಲ್ಲೇ ಕೋಪ. ಆ ಕೋಪ ಒಂಚೂರು ಹೆಚ್ಚು ಕಡಿಮೆ ಆಗಿ ಎದುರಿಗಿರುವವರ ಮೇಲೆ ಹುಲಿಯಂತೆ ಎರಗಿದ್ದೂ ಉಂಟು. ನೇರ ವಿಷಯಕ್ಕೆ ಬಂದರೆ ಬಾಲಿವುಡ್ ನ ಚಿಗುರು ಮೀಸೆ ನಟ ನೀಲ್ ನಿತಿನ್ ಮುಖೇಶ್ ಗೆ ಫೋನ್ ಮಾಡಿ ಸಲ್ಲು ಧಮಕಿ ಹಾಕಿದ್ದಾನೆ!

ಇಷ್ಟಕ್ಕೂ ಸಲ್ಲು ಕೋಪಕ್ಕ್ಕೆ ಕಾರಣ ಏನು? ಅದನ್ನು ನಿತಿನ್ ಮೇಲೆ ತೋರಿಸಿದ್ದೇಕೆ? ಅಸಲಿ ವಿಷಯಕ್ಕೆ ಬಂದರೆ... ಜಾನ್ ಅಬ್ರಹಾಂ, ನೀಲ್ ನಿತಿನ್ ಮುಖೇಶ್, ಕತ್ರಿನಾ ಕೈಫ್ ಮುಖ್ಯ ಪಾತ್ರಧಾರಿಗಳಾಗಿ 'ನ್ಯೂಯಾರ್ಕ್' ಚಿತ್ರ ರೂಪಗೊಳ್ಳುತ್ತಿದೆ. ಶೀಘ್ರದಲ್ಲೇ ತೆರೆಗೆ ಬರಲು ಈ ಚಿತ್ರ ಸಿದ್ಧವಾಗಿದೆ.

ಚಿತ್ರೀಕರಣದಲ್ಲಿ ಕತ್ರಿನಾರೊಂದಿಗೆ ನಿತಿನ್ ಒಂಚೂರು ಸಲಿಗೆಯಿಂದ ಇದ್ದನಂತೆ. ಅದನ್ನು ಕಂಡವರು ವಿಷಯವನ್ನು ಸಲ್ಲು ಕಿವಿಗೆ ಮುಟ್ಟಿಸಿದ್ದಾರೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಸಲ್ಲು ಫೋನ್ ಮಾಡಿ ನಿತಿನ್ ಗೆ ಧಮಕಿ ಹಾಕಿದ್ದಾನೆ. ಅದೂ ಕತ್ರಿನಾ ಮೊಬೈಲ್ ಫೋನ್ ನಿಂದ ಕರೆ ಬಂದಿದೆ.

ಕತ್ರಿನಾ ಫೋನ್ ಎಂದ ಕೂಡಲೆ ನಿತಿನ್ ಒಂಚೂರು ಆತುರಬಿದ್ದು ಸಲ್ಲು ಹತ್ತಿರ ಏನೇನೋ ಮಾತನಾಡಿಬಿಟ್ಟನಂತೆ! ಸೀನ್ ಕಟ್ ಮಾಡಿದರೆ...ಸಲ್ಲು ಲೈನಲ್ಲಿದ್ದ. ಸಲ್ಲು ಕೋಪ ತಣ್ಣಗಾಗುವವರೆಗೂ ವಾಚಾಮ ಗೋಚರ ನಿತಿನ್ ನನ್ನು ಬೈದು ಧಮಕಿ ಹಾಕಿದ್ದಾನೆ. ಇಂಗು ತಿಂದ ಮಂಗನಂತಾದ ನಿತಿನ್ ತಲೆ ಈಗ ಗಿರಗಿಟ್ಲೆ ಯಾಗಿದೆಯಂತೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada