»   » ನಾನ್ ವೆಜ್‌ಗೆ ನೋ ನೋ ಎಂದ ಕರೀನಾ ಕಪೂರ್

ನಾನ್ ವೆಜ್‌ಗೆ ನೋ ನೋ ಎಂದ ಕರೀನಾ ಕಪೂರ್

Posted By:
Subscribe to Filmibeat Kannada

ಬಾಲಿವುಡ್ ತಾರೆ ಕರೀನಾ ಕಪೂರ್ ನಾನ್ ವೆಜ್‌ ಕಂಡು ನಾನೂರು ಅಡಿ ದೂರ ನೆಗೆದು ಬಿದ್ದ ಸುದ್ದಿ ಇದು. ಕ್ಯಾಂಟೀನ್‌ನಲ್ಲಿ ಮೊಟ್ಟೆ ತಿನ್ನುವ ಸನ್ನಿವೇಶವೊಂದನ್ನು ಚಿತ್ರೀಕರಿಸಬೇಕಾಗಿತ್ತಂತೆ. ಅಲ್ಲಿಗೆ ಮೊಟ್ಟೆಯನ್ನೂ ತರಿಸಲಾಯಿತಂತೆ.ಆದರೆ ಕರೀನಾ ಮಾತ್ರ ಬಿಲ್ ಕುಲ್ ಎಂದ್ರೂ ಒಪ್ಪಲಿಲ್ಲವಂತೆ. ಕಾರಣ ಕರೀನಾ ಸಂಪೂರ್ಣ ಶಾಕಾಹಾರಿ!

ಮಾಂಸಾಹರಕ್ಕೆ ಗುಡ್ ಬೈ ಹೇಳಿ ಆರು ವರ್ಷಗಳಾಗಿವೆಯಂತೆ. ಚಿಕನ್ ಕಬಾಬ್, ಮಟನ್ ಬಿರ್ಯಾನಿ ತಿನ್ನುವುದನ್ನು ಬಿಟ್ಟು ದೀರ್ಘ ಸಮಯವಾಗಿದೆ. ಸಸ್ಯಾಹಾರಕ್ಕೆ ಸಂಪೂರ್ಣ ಕಟ್ಟುಬಿದ್ದೇನೆ. ಯಾವುದೇ ಕಾರಣಕ್ಕೂ ಮೊಟ್ಟೆ ತಿನ್ನಲ್ಲ ಎಂದರಂತೆ. ವಿಧಿ ಇಲ್ಲದೆ ನಿರ್ದೇಶಕರು ಮೊಟ್ಟೆ ರಹಿತ ಪಾನ್ ಕೇಕ್ ಆರ್ಡರ್ ಮಾಡಿದರಂತೆ.

ಒಂದು ವೇಳೆ ಈ ನಾನ್ ವೆಜ್ ಸನ್ನಿವೇಶಕ್ಕೆ ಬೇಕೆ ಬೇಕು ಅನ್ನಿಸಿದ್ದರೂ ನಾನು ಮುಟ್ಟುತ್ತಿರಲಿಲ್ಲ. ಚಿತ್ರವನ್ನಾದರೂ ಬಿಡುತ್ತೇನೆಯೇ ಹೊರತು ವ್ರತ ಬಿಡುವುದಿಲ್ಲ ಎಂದಿದ್ದಾರೆ. ಯುಎಸ್‌ನಲ್ಲಿ ನಡೆಯುತ್ತಿರುವ 'ಶಾರ್ಟ್ ಟರ್ಮ್ ಶಾದಿ' ಚಿತ್ರೀಕರಣದ ವೇಳೆ ನಡೆದ ಘಟನೆಯಿದು. ಚಿತ್ರಕ್ಕೆ ಶಕುನ್ ಬಾತ್ರಾ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಒಂದು ವೇಳೆ ಸೈಫ್ ಆಲಿಖಾನ್‌ರ ಕೈಹಿಡಿದರೆ ಕರೀನಾ ಪಾಡೇನು ಎಂಬ ಪ್ರಶ್ನೆ ಉದ್ಭವಿಸಿದೆ.

English summary
Leading Bollywood actress Kareena Kapoor refuses to eat non veg items, even an egg in the shootings. According to the actress, eating non veg is a big sin. "I never take non veg in my life" says Kareena firmly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada