For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಮತ್ತೊಮ್ಮೆ ಮಾಧುರಿ ದೀಕ್ಷಿತ್ ದರ್ಶನ

  |

  ನಟಿ ಮಾಧುರಿ ದೀಕ್ಷಿತ್ ಮತ್ತೆ ಕಿರುತೆರೆಗೆ ಮರಳಲಿದ್ದಾರೆ. ಈಗಾಗಲೇ ನಾಲ್ಕು ಸೀಸನ್ ಮುಗಿಸಿರುವ 'ಝಲಕ್ ದಿಖಲಾ ಜಾ' ಡಾನ್ಸ್ ಸೀಸನ್ನಿನ 5 ನೇ ಆವೃತ್ತಿ ಸದ್ಯದಲ್ಲೇ ಪ್ರಾರಂಭವಾಗಲಿದೆ. ಇದರಲ್ಲಿ ಜಡ್ಜ್ ಆಗಿ ಭಾಗವಹಿಸಲು ಮಾಧುರಿ ಒಪ್ಪಿಕೊಂಡಿದ್ದಾರೆ. ಈಗಾಗಲೇ ಅವರು 4ನೇ ಆವೃತ್ತಿಯ ಜಡ್ಜ್ ಆಗಿ ಯಶಸ್ವಿ ಎನಿಸಿಕೊಂಡಿದ್ದಾರೆ.

  ಕಳೆದ 4 ನೇ ಆವೃತ್ತಿಯಲ್ಲಿ, ರೇಮೋ ಡಿಸೋಜಾ ಮತ್ತು ಮಲೈಕಾ ಅರೋರ ಖಾನ್ ಅವರೊಂದಿಗೆ ಮಾಧುರಿ ಕೂಡ ನಿರ್ಣಾಯಕರಾಗಿ ಆಸನ ಅಲಂಕರಿಸಿದ್ದರು. ಈ ಬಾರಿಯೂ ಅವರು ಬಯಸಿ ಅದನ್ನು ಪಡೆಯುತ್ತಿದ್ದಾರೆ. ಕಾರಣ ಅವರಿಗೆ ಡಾನ್ಸ್ ಅಂದರೆ ಅಚ್ಚು-ಮೆಚ್ಚು. ಅಷ್ಟಕ್ಕೂ ಮಾಧುರಿ ಬರುತ್ತಾರೆಂದರೆ ಬೇಡ ಅನ್ನುವವರ್ಯಾರು?

  ಸದ್ಯ ಅಮೆರಿಕಾದಲ್ಲಿ ಇರುವ ಮಾಧುರಿ ಖಾಸಗಿ ಕೆಲಸಕ್ಕೋಸ್ಕರ ಅಲ್ಲಿಗೂ ಇಲ್ಲಿಗೂ ಓಡಾಡುತ್ತಿದ್ದಾರೆ. ಅಕ್ಟೋಬರ್ ನಲ್ಲಿ ಅವರು ಭಾರತಕ್ಕೆ ಮರಳಲಿದ್ದು. ನಂತರ ಈ ರಿಯಾಲಿಟಿ ಶೋನಲ್ಲಿ ಜಡ್ಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರ ಜೊತೆ ಕುಳಿತುಕೊಳ್ಲಲಿರುವ ಸಹ ಜಡ್ಜ್ ಗಳು ಯಾರು ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ. ಅಂದಹಾಗೇ ಈ ಮೊದಲು ಈ ಶೋ 2006ರಿಂದಲೂ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಈಗ ಕಲರ್ಸ್ ನಲ್ಲಿ ಪ್ರಸಾರವಾಗಲಿದೆ. (ಏಜೆನ್ಸೀಸ್ )

  English summary
  Actress Madhuri Dixit is now all set to make her comeback to small screen. The Bollywood star can now be seen as a judge on the fifth season of Jhalak Dikhla Ja. The dancing diva has signed up for the second time with the television dance reality show.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X