2020ಕ್ಕೆ ಅಣೆಕಟ್ಟುಗಳು ಏನಾಗಲಿವೆ; ಡ್ಯಾಮ್ 999 ನೋಡಿ

ಡ್ಯಾಮ್‌ಗಳ ಸ್ಥಿತಿಗತಿಗಳ ನೈಜ ಎಳೆಯ ಆಧಾರವಾಗಿ ತೆರೆಗೆ ಬರುತ್ತಿರುವ 3ಡಿ ಚಿತ್ರ 'ಡ್ಯಾಮ್ 999'. ಸೋಹನ್ ರಾಯ್ ನಿರ್ದೇಶನದ ಈ ಚಿತ್ರಕ್ಕೆ ಬಿಜ್ ಟಿವಿ ನೆಟ್‌ವರ್ಕ್ ಬಂಡವಾಳ ಹೂಡಿದೆ. ಆಶಿಷ್ ವಿದ್ಯಾರ್ಥಿ, ವಿಮಲಾ ರಾಮನ್, ರಜತ್ ಕಪೂರ್ ಮುಖ್ಯಭೂಮೆಕೆಯಲ್ಲಿದ್ದಾರೆ. ಈ ಚಿತ್ರದ ನವೆಂಬರ್ 25ರಂದು ತೆರೆಕಾಣುತ್ತಿದೆ.
ಚೀನಾದಲ್ಲಿ 1975ರಲ್ಲಿ ಸಂಭವಿಸಿದ ಬಾಂಕ್ಟಿಯಾ ಅಣೆಕಟ್ಟು ದುರಂತದ ಸುತ್ತುವ ಸುತ್ತ ಕತೆಯನ್ನು 'ಡ್ಯಾಮ್ 999' ಚಿತ್ರ ಒಳಗೊಂಡಿದೆ. ಇಬ್ಬರು ನಾವಿಕರು ಸುದೀರ್ಘ ಸಮಯದ ನಂತರ ಫ್ರಂಟ್ ಸಬಂಗ್ ಎಂಬ ಅತಿದೊಡ್ಡ ಹಡಗಿನಲ್ಲಿ ಸ್ವದೇಶಕ್ಕೆ ಹೊರಡುತ್ತಾರೆ. ಸಮುದ್ರದಲ್ಲಿ ಎದ್ದ ಭೀಕರ ಅಲೆಗಳಿಗೆ ಸಿಕ್ಕು ದಿಕ್ಕುತೋಚದಂತಾಗುತ್ತದೆ. ಅಲ್ಲಿಂದ ಅವರು ಹೊರಬೀಳುವ ಸಾಹಸಮಯ ಸನ್ನಿವೇಶಗಳು ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತವೆ.
ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅಣೆಕಟ್ಟು ಮುರಿದುಬೀಳುವ ಸನ್ನಿವೇಶಗವಂತೂ ಪ್ರೇಕ್ಷಕರನ್ನು ನಿಬ್ಬರಗಾಗಿಸುತ್ತದೆ. ಈ ದೃಶ್ಯಗಳನ್ನು ಗ್ರಾಫಿಕ್ಸ್‌ನಲ್ಲಿ ಚಿತ್ರಿಸಲಾಗಿದ್ದು ಪ್ರೇಕ್ಷಕರನ್ನು ಹೊಸ ಅನುಭವ ನೀಡಲಿದೆ ಎನ್ನುತ್ತದೆ ಚಿತ್ರತಂಡ. ಈ ಚಿತ್ರಕ್ಕೆ ಛಾಯಾಗ್ರಹಣ ಅಜಯ್ ವಿನ್ಸೆಂಟ್, ಸಂಗೀತ ಓಸ್‌ಪಚ್ಚನ್ ನೀಡಿದ್ದಾರೆ. (ಏಜೆನ್ಸೀಸ್)


Click it and Unblock the Notifications











