For Quick Alerts
  ALLOW NOTIFICATIONS  
  For Daily Alerts

  ನೇಪಾಳಿ ಮೂಲದ ನಟಿ ಕೊಲೆ, ಇಬ್ಬರ ಬಂಧನ

  By Mahesh
  |

  ಪ್ರತಿಭಾವಂತ ನೇಪಾಳಿ ನಟಿ ಮೀನಾಕ್ಷಿ ಥಾಪಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಜ್ಯೂನಿಯರ್ ಆರ್ಟಿಸ್ಟ್ ಗಳನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.

  26 ವರ್ಷದ ಮೀನಾಕ್ಷಿ ಥಾಪಾ ಮೇಲೆ ಹಲ್ಲೆ ಮಾಡಿದ ಅಮಿತ್ ಕುಮಾರ್ ಜೈಸ್ವಾಲ್ ಹಾಗೂ ಪೃಥ್ವಿ ಎಲ್ವಿನಾ ಸೂರಿ ಎಂಬುವರು ನಂತರ ಆಕೆಯನ್ನು ಉತ್ತರಪ್ರದೇಶದ ಗೋರಖ್ ಪುರ ಜಿಲ್ಲೆಯಲ್ಲಿ ಹತ್ಯೆಗೈದಿದ್ದರು.

  ಬಿಗ್ ಬಜೆಟ್ ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇವೆ. ನಮಗೆ ಇಷ್ಟು ಹಣ ಕೊಡು ಸಾಕು ಎಂದು ಈ ಇಬ್ಬರು ಖದೀಮರು ಆಕೆಯನ್ನು ಪದೇ ಪದೇ ಪೀಡಿಸುತ್ತಿದ್ದರು. ಇದಲ್ಲದೆ ಮೀನಾಕ್ಷಿ ಕುಟುಂಬ ವರ್ಗಕ್ಕೂ ಬೆದರಿಕೆ ಒಡ್ಡಿ 15 ಲಕ್ಷ ರು ನೀಡುವಂತೆ ಹೇಳಿದ್ದರು. ಆಕೆಯನ್ನು ಕೊಂದ ಮೇಲೂ ಈ ಬೆದರಿಕೆ ಕರೆ ಮುಂದುವರೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

  ಮುಂಬೈನ ಬಾಂದ್ರಾ ಬಳಿ ಈ ಇಬ್ಬರನ್ನು ಬಂಧಿಸಲಾಗಿದ್ದು, ಇಬ್ಬರೂ ಕೂಡಾ ತಮ್ಮ ತಪು ಒಪ್ಪಿಕೊಂಡಿದ್ದಾರೆ. ಮೀನಾಕ್ಷಿ ಥಾಪಾ ಶವ ಇನ್ನೂ ಸಿಗದ ಕಾರಣ ಮುಂಬೈ ಪೊಲೀಸರು ಉತ್ತರಪ್ರದೇಶ ಪೊಲೀಸರ ಸಹಾಯ ಪಡೆದು ಶವಕ್ಕಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

  English summary
  Two junior film artistes have been arrested by the Mumbai police for allegedly abducting and murdering Meenakshi Thapa, an aspiring Nepalese actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X