»   » ತೆರಿಗೆ ಪಾವತಿಯಲ್ಲೂ ಶಾರುಖ್ ಖಾನ್ ಕಿಂಗ್

ತೆರಿಗೆ ಪಾವತಿಯಲ್ಲೂ ಶಾರುಖ್ ಖಾನ್ ಕಿಂಗ್

Posted By:
Subscribe to Filmibeat Kannada

ತಾವು ಕೇವಲ ನಟನೆಯಲ್ಲಷ್ಟೇ ಕಿಂಗ್ ಖಾನ್ ಅಲ್ಲ ತೆರಿಗೆ ಪಾವತಿಯಲ್ಲೂ ಅಷ್ಟೆ ಎಂಬುದನ್ನು ಬಾಲಿವುಡ್ ನಟ ಶಾರುಕ್ ಖಾನ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ತೆರಿಗೆ ಪಾವತಿ ಮಾಡುವ ಬಾಲಿವುಡ್ ನಟ ನಟಿಯರ ಪೈಕಿ ಶಾರುಖ್ ಮೊದಲಿಗರಾಗಿದ್ದಾರೆ.

ಶಾರುಖ್ ಖಾನ್ ಈ ವರ್ಷ ಒಟ್ಟಾರೆ ರು.5 ಕೋಟಿ ತೆರಿಗೆ ಪಾವತಿಸಿದ್ದಾರೆ. ನಂತರದ ಸ್ಥಾನದಲ್ಲಿ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರಿದ್ದಾರೆ. ಅವರು ರು.4.5 ಕೋಟಿ ತೆರಿಗೆ ಪಾವತಿಸಿದ್ದಾರೆ. ಖಾನ್ ಮತ್ತು ಅಕ್ಷಯ್ ಮೊದಲೆರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಮೀರ್ ಖಾನ್ (ರು.4 ಕೋಟಿ), ಸೈಫ್ ಅಲಿಖಾನ್ ಹಾಗೂ ರಣಬೀರ್ ಕಪೂರ್ (ರು.2.5 ಕೋಟಿ), ಸಲ್ಮಾನ್ ಖಾನ್ (ರು.2 ಕೋಟಿ), ಕರೀನಾ ಕಪೂರ್ (ರು. 1 ಕೋಟಿ) ತೆರಿಗೆಯನ್ನು ಪಾವತಿಸಿದ್ದಾರೆ. ಅತ್ಯಧಿಕ ತೆರಿಗೆ ಪಾವತಿಸುವವರ ಪಟ್ಟಿ ಹೃತಿಕ್ ರೋಷನ್ ಗೆ ಕೊನೆಯ ಸ್ಥಾನದಲ್ಲಿದ್ದಾರೆ. ಅವರು ಕೇವಲ ರು.50 ಲಕ್ಷ ತೆರಿಗೆ ಕಟ್ಟಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada