»   » ಬಿಗ್ ಬಿ, ಕಿಂಗ್ಸ್ ಲೆ ಜಂಟಿ ಅಭಿನಯದ 'ತೀನ್ ಪತ್ತಿ'

ಬಿಗ್ ಬಿ, ಕಿಂಗ್ಸ್ ಲೆ ಜಂಟಿ ಅಭಿನಯದ 'ತೀನ್ ಪತ್ತಿ'

Posted By:
Subscribe to Filmibeat Kannada

ಅಮಿತಾಬ್ ಬಚ್ಚನ್, ಬೆನ್ ಕಿಂಗ್ಸ್ ಲೆ ಮುಖ್ಯಪಾತ್ರಗಳಲ್ಲಿ ನಟಿಸಿದ ಚಿತ್ರ 'ತೀನ್ ಪತ್ತಿ'. ಲೀನಾ ಯಾದವ್ ಚಿತ್ರದ ನಿರ್ದೇಶಕರು. ಈ ಚಿತ್ರವನ್ನು ಫೆಬ್ರವರಿ 12ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಚಿತ್ರದ ನಿರ್ಮಾಪಕರು ಅಂಬಿಕಾ ಹಿಂದುಜಾ.

ಮಾಧವನ್, ರೀಮಾ ಸೇನ್, ಸೈರಾ ಮೋಹನ್, ಸಿದ್ದಾರ್ಥ್ ಖೇರ್, ಧ್ರುವ ಗಣೇಶ್, ವೈಭವ್ ತಲ್ವಾರ್, ಶ್ರದ್ಧ ಕಪೂರ್ ಮುಂತಾದವರ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಚಿತ್ರದ ಬಗ್ಗೆ ಲೀನಾ ಯಾದವ್ ಮಾತನಾಡುತ್ತಾ, ಅಮಿತಾಬ್, ಕಿಗ್ಸ್ ಲೆ ಪೋಷಿಸಿದ ಪಾತ್ರಗಳು ಚಿತ್ರದ ಹೈಲೈಟ್. ಅಮಿತಾಬ್, ಕಿಂಗ್ಸ್ ಲೆ ನಡುವಿನ ಸನ್ನಿವೇಶಗಳು ಪ್ರೇಕ್ಷಕರ ಮನಮೆಚ್ಚುತ್ತವೆ.ಇಬ್ಬರೂ ಪೈಪೋಟಿಗೆ ಬಿದ್ದು ನಟಿಸಿದ್ದಾರೆ ಎನ್ನುತ್ತಾರೆ.

ಕಿಂಗ್ಸ್ ಲೆ ಬಳಿ ಕತೆ ಬಗ್ಗೆ ಮಾತನಾಡುಲು ಹೊರಟಾಗ ಸ್ವಲ್ಪ ಭಯಪಟ್ಟಿದೆ. ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಾರೆಯೇ? ಇಲ್ಲವೆ? ಎಂಬ ಸಣ್ಣ ಅಳುಕು ಕಾಡುತ್ತಿತ್ತು. ಆದರೆ ಚಿತ್ರಕತೆಯನ್ನು ನೋಡಿದ ಕೂಡಲೆ ಅವರು ನಟಿಸಲು ಒಪ್ಪಿದರು. ಈ ಹಿಂದೆ ಸಂಜಯ್ ದತ್, ಐಶ್ವರ್ಯ ರೈ ಅವರೊಂದಿಗೆ 'ಶಬ್ದ್' ಚಿತ್ರ ಮಾಡಿದಾಗ ಆದ ಸಂತೋಷಕ್ಕಿಂತ ಈ ಚಿತ್ರಕ್ಕೆ ಕೆಲಸ ಮಾಡುವಾಗ ಆಗುತ್ತಿದೆ ಎನ್ನುತ್ತಾನೆ ಲೀನಾ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada