»   » ಬಿಪಾಷಾ ಬಸು ಏಷ್ಯಾದ ನಂಬರ್ ಒನ್ ಕಾಮಕನ್ನಿಕೆ

ಬಿಪಾಷಾ ಬಸು ಏಷ್ಯಾದ ನಂಬರ್ ಒನ್ ಕಾಮಕನ್ನಿಕೆ

Subscribe to Filmibeat Kannada

ಲಂಡನ್, ನ.16: ಬಾಲಿವುಡ್ ಬಿನ್ನಾಣಗಿತ್ತಿ ಬಿಪಾಷಾ ಬಸು(28) ಅಂದಕ್ಕೆ ಮತ್ತೊಂದು ಗರಿ ಮೂಡಿದೆ. ಈಗ ಆಯಮ್ಮ ಪ್ರಪಂಚದಲ್ಲಿಯೇ 'ಏಷ್ಯಾದ ಸೆಕ್ಸಿ ಮಹಿಳೆ-2007" ಎಂಬ ಪಟ್ಟ ಧರಿಸಿದ್ದಾರೆ.

ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್(42), ಪ್ರಿಯಾಂಕ ಚೋಪ್ರ(25) ಕ್ರಮವಾಗಿ ಎರಡು ಮತ್ತು ಮೂರನೆ ಸ್ಥಾನವನ್ನು ಪಡೆದ ಸೆಕ್ಸಿ ಮಹಿಳೆಯರು ಎಂದು ಲಂಡನ್ ಮೂಲದ ಏಷ್ಯಾ ದೈನಿಕ 'ಈಸ್ಟರ್ನ್ ಐ" ಪತ್ರಿಕೆ ತಿಳಿಸಿದೆ.

ಬಿಪಾಷಾ ಬಸು, ಮಾಧುರಿ ದೀಕ್ಷಿತ್, ಪ್ರಿಯಾಂಕ ಚೋಪ್ರ, ಐಶ್ವರ್ಯ ರೈ, ಲೈಲಾ ರೌಸ್, ಶಿಲ್ಪಾ ಶೆಟ್ಟಿ, ಕತ್ರಿನಾ ಕೈಫ್, ಕರೀನಾ ಕಪೂರ್, ಲಾರಾ ದತ್ತಾ ಹಾಗೂ ಇಮಾನ್ ಆಲಿ ಇವರೇ ಆ ಹತ್ತು ಸೆಕ್ಸಿ ಲಲನಾಮಣಿಯರು.

ಕಳೆದ ಮೂರು ವರ್ಷಗಳಲ್ಲಿ ಈಸ್ಟರ್ನ್ ಐ ಪತ್ರಿಕೆ ಏಷ್ಯಾದ 50ಸೆಕ್ಸಿ ಮಹಿಳೆಯರ ಪಟ್ಟಿಯನ್ನು ಪ್ರಕಟಿಸಿದೆ. 2005ರಲ್ಲಿ ಬಿಪಷಾ ಈ ಪಟ್ಟವನ್ನು ಧರಿಸಿದ್ದರು. ಸೆಕ್ಸಿ ಕಿರೀಟವನ್ನು ಮತ್ತೆ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಸೆಕ್ಸಿ ಅನ್ನುವುದು ಬರೀ ನೋಟದಿಂದ ಅಲ್ಲ ನಮ್ಮ ವ್ಯಕ್ತಿತ್ವವನ್ನು ಹೆಜ್ಜೆಹೆಜ್ಜೆಯಲ್ಲೂ ಪ್ರತಿಬಿಂಬಿಸುವಂತಿರಬೇಕು. ನನಗೆ ಓಟು ಹಾಕಿ ಗೆಲ್ಲಿಸಿದವರಿಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಬಿಪಷಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಿಪಾಷಾ ಜೀವಂತ ಲೈಂಗಿಕ ಆಕರ್ಷಣೆಯ ಕೇಂದ್ರ ಬಿಂದು. ಆಕೆಯ ನಟನಾ ಕೌಶಲ್ಯ, ಸೌಂದರ್ಯ, ಲಾವಣ್ಯ ಇವೆಲ್ಲವೂ ಮಾಧ್ಯಮ ಪ್ರಪಂಚವನ್ನು ಚುಂಬಕ ಶಕ್ತಿಯಂತೆ ಆಕರ್ಷಿಸುತ್ತವೆ ಎನ್ನುತ್ತಾರೆ ಈಸ್ಟರ್ನ್ ಐ ಪತ್ರಿಕೆಯ ಸಂಪಾದಕ ಹೇಮಂತ್ ವರ್ಮಾ. (ಏಜನ್ಸೀಸ್ )

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada