»   » ನಕಲಿ ರಾಜ್ ನೀತಿ ನೋಡಿದ ಅಸಲಿ ನಾಯಕರು

ನಕಲಿ ರಾಜ್ ನೀತಿ ನೋಡಿದ ಅಸಲಿ ನಾಯಕರು

Posted By:
Subscribe to Filmibeat Kannada

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಸ್ಥಾನದ ಬಿಜೆಪಿ ಘಟಕ ಸುಮಾರು 80 ಜನ ಎಂಎಲ್ ಎಗಳನ್ನು ಸ್ಟಾರ್ ಹೋಟೆಲ್ ನಲ್ಲಿ ಕೂಡಿ ಹಾಕಿ ಸುದ್ದಿ ಮಾಡಿತ್ತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಘಟಕ ಈಗ ಮತ್ತೊಂದು ಮುಜುಗರಕ್ಕೀಡಾಗಿದೆ.

ಮನರಂಜನೆಗಾಗಿ ಪ್ರಕಾಶ್ ಝಾ ಅವರ 'ರಾಜ್ ನೀತಿ' ಚಿತ್ರವನ್ನುವೀಕ್ಷಿಸಿದ ಖುಷಿಯಲ್ಲಿದ್ದ ಬಿಜೆಪಿ ಶಾಸಕರಿಗೆ ಮೇಲೆ ನಿರ್ದೇಶಕ ಪ್ರಕಾಶ್ ಕೇಸು ಹಾಕಿದ್ದಾರೆ. ಜನಪ್ರತಿನಿಧಿಗಳು ನಕಲಿ ಡಿವಿಡಿ ಮೂಲಕ ಚಿತ್ರ ವೀಕ್ಷಿಸಿದ್ಡೇ ಇದಕ್ಕೆ ಕಾರಣ.

ಬಿಜೆಪಿ ಶಾಸಕರಿಗೆ ಪೈರೆಟೆಡ್ (ನಕಲಿ) ಡಿವಿಡಿ ತೋರಿಸಿದ ಪಂಚತಾರಾ ಹೊಟೇಲ್ ಮೇಲೂ ಕೇಸು ಜಡಿಯಲಾಗಿದೆ. ಘಟನೆಯಿಂದ ತೀವ್ರ ಮುಜುಗರ ಅನುಭವಿಸಿರುವ ರಾಜಸ್ತಾನ ಬಿಜೆಪಿ ಘಟಕವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಝಾ, ಇದು ನಿಜಕ್ಕೂ ನಾಚಿಕೆಗೇಡು; ಕಾನೂನು ರಚಿಸುವವರೇ ಈ ರೀತಿ ಕಾನೂನನ್ನು ಕೈಗೆತ್ತಿಕೊಂಡರೆ ಗತಿಯೇನು? ಇತರರಿಗೆ ಮಾದರಿಯಾಗಬೇಕಾದ ನಮ್ಮ ಪ್ರತಿನಿಧಿಗಳಿಗೆ ಕಾನೂನು ಉಲ್ಲಂಘಿಸಿರುವುದು ಬೇಸರದ ಸಂಗತಿ ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada