For Quick Alerts
  ALLOW NOTIFICATIONS  
  For Daily Alerts

  ತಾರೆ ಕರೀನಾ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್

  By Rajendra
  |

  ಬಾಲಿವುಡ್ ತಾರೆ ಕರೀನಾ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ತನ್ನ ಬಹು ಕಾಲದ ಬಾಯ್‌ಫ್ರೆಂಡ್ ಸೈಫ್ ಆಲಿ ಖಾನ್ ಜೊತೆ ಕರೀನಾ ನಿಖಾ 2012ರ ಅಂತ್ಯಕ್ಕೆ ನೆರವೇರುವುದು ಗ್ಯಾರಂಟಿಯಾಗಿದೆ ಎಂದು ಪ್ರಮುಖ ಆಂಗ್ಲ ದೈನಿಕ 'ಮಿಡ್ ಡೇ' ಪ್ರಕಟಿಸಿದೆ.

  ಪತ್ರಿಕೆಯೊಂದಿಗೆ ಮಾತನಾಡಿರುವ ಕರೀನಾ, ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದೇ ವರ್ಷಾಂತ್ಯಕ್ಕೆ ತಾವು ಸೈಫ್ ಆಲಿ ಖಾನ್‌ರನ್ನು ವರಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ದಿನಾಂಕ ಇನ್ನೂ ನಿಗದಿಯಾಗದ ಕಾರಣ ಆಕೆ ಕರಾರುವಕ್ಕಾದ ಡೇಟ್ ತಿಳಿಸಿಲ್ಲ.

  ಸದ್ಯಕ್ಕೆ 'ಹೀರೋಯಿನ್' ಚಿತ್ರದಲ್ಲಿ ಬಿಜಿಯಾಗಿರುವ ಕರೀನಾ, ಇಷ್ಟು ದಿನಗಳ ಕಾಲ ಸೈಫ್ ಜೊತೆಗಿನ ಮದುವೆ ಸುದ್ದಿಗಳನ್ನು ನಿರಾಕರಿಸುತ್ತಲೇ ಬಂದಿದ್ದರು. ಸೈಫ್ ಅವರ ಸ್ವಂತ ನಿರ್ಮಾಣದ ಚಿತ್ರ 'ಏಜೆಂಟ್ ವಿನೋದ್' ಬಿಡುಗಡೆಯಾದ ಕೂಡಲೆ ಇಬ್ಬರೂ ಹಾರ ಬದಲಾಯಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಆಗಿಂದಾಗ್ಗೆ ಕೇಳಿಬಂದಿದ್ದವು. (ಏಜೆನ್ಸೀಸ್)

  English summary
  Saif Ali Khan's ladylove Kareena Kapoor has finally spoken about her much-awaited marriage. A leading daily quoted Kareena confirming that she would get married to beau Saif at the end of 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X