»   » ಗೂಗಲ್ ಸರ್ಚ್‌ನಲ್ಲಿ ಕತ್ರಿನಾ ಕೈಫ್ ನಂಬರ್ ಒನ್ ತಾರೆ

ಗೂಗಲ್ ಸರ್ಚ್‌ನಲ್ಲಿ ಕತ್ರಿನಾ ಕೈಫ್ ನಂಬರ್ ಒನ್ ತಾರೆ

Posted By:
Subscribe to Filmibeat Kannada

ಸರ್ವಜನಪ್ರಿಯ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಅತಿಹೆಚ್ಚು ಹುಡುಕಾಟ ನಡೆಸಿದ ಬಾಲಿವುಡ್ ತಾರೆ ಯಾರಿರಬಹುದು? ಐಶ್ವರ್ಯ ರೈ ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಬಳುಕುವ ಬಳ್ಳಿ ಕತ್ರಿನಾ ಕೈಫ್‌ ರನ್ನು ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಅತ್ಯಧಿಕವಾಗಿ ಹುಡುಕಾಡಲಾಗಿದೆ.

"ಭಾರತಕ್ಕಿಂತಲೂ ಕತ್ರಿನಾ ಕೈಫ್‌ರನ್ನು ಪಾಕಿಸ್ತಾನಿಯರು ಹೆಚ್ಚಾಗಿ ಹುಡುಕಿದ್ದಾರೆ. ಭಾರತೀಯ ಅಂತರ್ಜಾಲ ಬಳಕೆದಾರರಲ್ಲಿ ಜಿಮೇಲ್ ಮತ್ತು ಆರ್ಕುಟ್ ಸಂಪರ್ಕ ತಾಣಗಳು ಅತ್ಯಂತ ಜನಪ್ರಿಯವಾಗಿದ್ದು, 2008ರಿಂದ ಯೂಟ್ಯೂಬ್ ಕ್ಷಿಪ್ರಗತಿಯಲ್ಲಿ ಜನಪ್ರಿಯವಾಗುತ್ತಿದೆ" ಎಂದಿದ್ದಾರೆ ಗೂಗಲ್ ಕಂಟ್ರಿ ಹೆಡ್ ವಿನಯ್ ಗೋಯಲ್.

ಈ ಬಗ್ಗೆ ಕತ್ರಿನಾ ಕೈಫ್ ಪ್ರತಿಕ್ರಿಯಿಸುತ್ತಾ, ಈ ಸುದ್ದಿ ಕೇಳಿ ತುಂಬಾ ಸಂತೋಷವಾಯಿತು. ಅಭಿಮಾನಿಗಳು ತನ್ನ ಚಿತ್ರಗಳ ಬಗ್ಗೆ ತೋರುತ್ತಿರುವ ಆಸಕ್ತಿಗೆ ಧನ್ಯವಾದಗಳು ಎಂದಿದ್ದಾರೆ. ಬಾಲಿವುಡ್ ಎಂದರೆ ಸಾಮಾನ್ಯವಾಗಿ ಇಲ್ಲಿ ಪುರುಷರದೇ ಅಧಿಪತ್ಯ. ಆದರೆ ಅಂತರ್ಜಾಲದಲ್ಲಿ ಮಾತ್ರ ಮಹಿಳೆಯರು ಮುಂದಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ ಕತ್ರಿನಾ.

ಗೂಗಲ್ ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಕಾಲಮಹಾತ್ಮೆ ಪ್ರಕಾರ (Zeitgeist) ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋವಾ, ಕೇರಳ ಮತ್ತು ಕಾಶ್ಮೀರಗಳನ್ನು ಅತಿ ಹೆಚ್ಚು ಜಾಲಾಡಲಾಗಿದೆ. ಕತ್ರಿನಾ ಕೈಫ್ ಜೊತೆ ಬಾಲಿವುಡ್‌ನ ಹಲವಾರು ತಾರೆಗಳನ್ನು ಹುಡುಕಲಾಗಿದೆ ಎಂದು ಗೂಗಲ್ ವರದಿ ತಿಳಿಸಿದೆ. ವಿಶ್ವದ ಅತ್ಯಂತ ಸೆಕ್ಸಿ ಮಹಿಳೆ ಕತ್ರಿನಾ ಕೈಫ್ ವಿಡಿಯೋ

English summary
Bollywood actress Katrina Kaif is the most searched person in the world’s leading search engine, Google. According to Google country head Vinay Goel, the most searched celebrity Katrina Kaif is more popular in Pakistan than in India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada