»   » ದೀಪಿಕಾ ಕಾಲಿಗೆ ಡೈವ್ ಹೊಡೆದ ರಣಬೀರ್ ಕಪೂರ್!

ದೀಪಿಕಾ ಕಾಲಿಗೆ ಡೈವ್ ಹೊಡೆದ ರಣಬೀರ್ ಕಪೂರ್!

Posted By:
Subscribe to Filmibeat Kannada

ಈ ಸುದ್ದಿ ಓದಿದರೆ ಅಬ್ಬಬ್ಬಾ ಇದೆಂಥಾ ನಾಚಿಕೆಗೇಡಿನ ಸಂಗತಿ ಅಂದುಕೊಳ್ಳುತ್ತೀರಾ! ಇದು ನಿಜಕ್ಕೂ ಗಾಸಿಪ್ ಸುದ್ದಿ ಅಲ್ಲವೇ ಅಲ್ಲ. ನಿಜವಾಗಿಯೂ ನಡೆದದ್ದು. ತಾರೆ ದೀಪಿಕಾ ಪಡುಕೋಣೆ ಕಾಲಿಗೆ ಆಕೆಯ ಮಾಜಿ ಪ್ರಿಯತಮ ರಣಬೀರ್ ಕಪೂರ್ ಡೈವ್ ಹೊಡೆದ ಸುದ್ದಿ ಇದು.

ಕಲರ್ಸ್ ವಾಹಿನಿಯ ಸ್ಕ್ರೀನ್ ಪ್ರಶಸ್ತಿ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವೇದಿಕೆ ಮೇಲಿದ್ದ ದೀಪಿಕಾರ ಕಾಲನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡಿದ್ದಾನೆ ಪುಣ್ಯಾತ್ಮ. ಇದರಿಂದ ದೀಪಿಕಾ ನಾಚಿ ನೀರಾಗಿ ಹುಸಿ ನಗುತ್ತಾ ವೇದಿಕೆಯಿಂದ ಕೆಳಗಿಳಿದಿದ್ದಾರೆ.

'ರಾಕ್‌ಸ್ಟಾರ್' ಚಿತ್ರದಲ್ಲಿನ ಅಭಿನಯಕ್ಕಾಗಿ ರಣಬೀರ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದರು. ಪ್ರಶಸ್ತಿಯನ್ನು ದೀಪಿಕಾ ಪಡುಕೋಣೆ ಹಾಗೂ ಸುಭಾಷ್ ಘಾಯ್ ವಿತರಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಶಸ್ತಿ ಪಡೆಯಲು ಬಂದ ರಣಬೀರ್ ಮೊದಲು ಸುಭಾಷ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಪಕ್ಕದಲ್ಲೇ ಇದ್ದ ದೀಪಿಕಾ ಕಾಲಿಗೂ ಡೈವ್ ಹೊಡೆದರು. (ಏಜೆನ್ಸೀಸ್).

English summary
Ranbir Kapoor has taken all by surprise when he bent down to touch Deepika Padukone’s feet at Colors Screen award function. Ranbir touched Subhash Ghai’s feet and seeks his blessings then he went to Deepika, bowed to touch her feet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada