»   » ಮನೆ ಮುರುಕಿ ರಾಣಿ ಮುಖರ್ಜಿಗೆ ಬೇರೆ ಗಂಡು ಸಿಗಲಿಲ್ವಾ?

ಮನೆ ಮುರುಕಿ ರಾಣಿ ಮುಖರ್ಜಿಗೆ ಬೇರೆ ಗಂಡು ಸಿಗಲಿಲ್ವಾ?

Subscribe to Filmibeat Kannada

ದೇಶದಲ್ಲಿ ಗಂಡುಗಳಿಗೆ ಗತಿಯಿಲ್ಲವೇ? ವಿವಾಹಿತ ಪುರುಷರ ಹಿಂದೆಯೇ ಈ ಸಿನಿಮಾ ನಟಿಯರು ಯಾಕೆ ಬೀಳುತ್ತಾರೋ ಗೊತ್ತಿಲ್ಲ. ಮನೆ ಮುರುಕಿ ನಟಿಯರ ಸಂಖ್ಯೆ ಹೆಚ್ಚುತ್ತಿದೆ. ಇದು ಬಾಲಿವುಡ್ , ಹಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ತೀರಾ ಸಾಮಾನ್ಯ ಸಂಗತಿ. ಈ ಪಟ್ಟವನ್ನು ರಾಣಿ ಮುಖರ್ಜಿ ಸ್ವೀಕರಿಸುತ್ತಾರಾ? ನೋಡೋಣ. ರಾಣಿ ಮುಖರ್ಜಿ ಮದುವೆಯದೇ ಬಾಲಿವುಡ್ ನಲ್ಲಿನ ಸದ್ಯದ ಗುಸುಗುಸು. ನಿರ್ದೇಶಕ ಆದಿತ್ಯ ಛೋಪ್ರಾಗೆ ಅವನ ಹೆಂಡತಿಯಿಂದ ಡೈವರ್ಸ್ ಸಿಕ್ಕರೇ, ಫೆ.10,2008ರಂದು ರಾಣಿ ಮುಖರ್ಜಿ ಜೊತೆ ಮದುವೆ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಮ್ಮ ಮದುವೆ ಸುದ್ದಿಯನ್ನು, ನಡೆದಿದೆ ಎನ್ನಲಾದ ನಿಶ್ಛಿತಾರ್ಥವನ್ನು ಸಾರಸಗಟಾಗಿ ರಾಣಿ, ತಳ್ಳಿ ಹಾಕಿದ್ದಾರೆ. ಬೆಂಕಿ ಇಲ್ಲದೇ ಹೊಗೆ ಬರೋದಿಲ್ಲ. ಮದುವೆ ಆಗುತ್ತದೆ ನೋಡ್ತಾ ಇರಿ.. ಫೆ.10ನೇ ತಾರೀಖು ಜೋಧ್ ಪುರದ ಉಮೈದ್ ಭವನವನ್ನು ಮದುವೆಗಾಗಿ ಬುಕ್ ಮಾಡಲಾಗಿದೆ. ಪತ್ನಿ ಪಾಯಲ್ ಅವರಿಂದ ಡೈವರ್ಸ್ ಸಿಗುವುದು ಕಷ್ಟವೇನಿಲ್ಲ. ಫೆಬ್ರವರಿ ವೇಳೆಗೆ ಆದಿತ್ಯಗೆ ಬಿಡುಗಡೆ ಸಿಗಲಿದೆ. ಹೀಗಾಗಿ ರಾಣಿ ಜೊತೆ ಎರಡನೇ ಮದುವೆ ಗ್ಯಾರಂಟಿ ಎಂದು ಬಾಲಿವುಡ್ ಪತ್ರಿಕೆಗಳು ಬರೆದಿವೆ.

ಪ್ಯಾರಾಗಾನ್ ಹವಾಯಿ ಚಪ್ಪಲಿ, ಲಕ್ಸ್ ಸಾಬೂನು, ಬಿಸ್ಕತ್ತು ಮತ್ತು ಮಣ್ಣು ಮಸಿ ಸೇರಿದಂತೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ರಾಣಿ, ಬಾಲಿವುಡ್ ನಲ್ಲಿ ಆರಂಭದಲ್ಲಿ ಕಾಣಿಸಿಕೊಂಡಾಗ ತುಸು ಡುಮ್ಮಿ ಥರಾ ಕಂಡಿದ್ದಳು. ನಂತರದ ದಿನದಲ್ಲಿ ಮೈಮಾಟ ಬದಲಾಯಿತು. ಜೊತೆಗೆ ಅಭಿನಯದಲ್ಲೂ ಪ್ರಬುದ್ಧತೆ ಬಂತು. ಹಿಂದೆ ಅಭಿಷೇಕ್ ಜೊತೆ ಸಹಾ ರಾಣಿ ಹೆಸರು ಸೇರಿಕೊಂಡು, ಗುಸುಗುಸು ಹುಟ್ಟಿತ್ತು. ಏನೋ ಬಿಡಿ, ಯಾರು ಯಾರನ್ನೋ ಮದುವೆಯಾದ್ರೆ ನಮಗೇನು. ಅದು ಅವರ ಖಾಸಗಿ ವಿಷ್ಯಾ..

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada