For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ತಿರುಪತಿಗೇನಾದ್ರು ಹೋಗಿದ್ರಾ!

  By Rajendra
  |

  ಬಾಲಿವುಡ್ ನಟ ಅಮೀರ್ ಖಾನ್ ಹಿಂದೊಮ್ಮೆ ತಲೆ ಬೋಳಿಸಿಕೊಂಡಿದ್ದರು. 'ಗಜನಿ' ಚಿತ್ರದ ಪಾತ್ರಕ್ಕಾಗಿ ಅವರು ಹೀಗೆ ಮಾಡಿಕೊಂಡಿದ್ದರು. ಈಗ ಮತ್ತೊಮ್ಮೆ ಅವರು ಕೇಶ ಮುಂಡನ ಮಾಡಿಕೊಂಡಿದ್ದಾರೆ. ಅಮೀರ್ ಖಾನ್ ಅವರ ಈ ಹೊಸ ಗೆಟಪ್‌ಗೆ ಕಾರಣ ಹುಡುಕ ಹೊರಟರೆ ಕೆಲವೊಂದು ಮಹತ್ವದ ಸಂಗತಿಗಳು ಹೊರಬಿದ್ದಿವೆ.

  ನವೆಂಬರ್ 8ರಂದು ಅಮೀರ್ ತಮ್ಮ ಮುಂಬೈ ಬಾಂದ್ರಾದ ತಮ್ಮ ಮನೆಯಲ್ಲಿ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಅವರ ಅಕ್ಕಪಕ್ಕದ ಮನೆಯವರು ಅಮೀರ್ ಅವರ ಗೆಟಪ್ ನೋಡಿ ಹೌಹಾರಿದ್ದರು. ಅಮೀರ್ ಕೂಡ ಎಲ್ಲೂ ತಮ್ಮ ಬೋಳು ತಲೆಯ ರಹಸ್ಯವನ್ನು ಬಹಿರಂಗಪಡಿಸಲಿಲ್ಲ.

  ಅವರು ತಮ್ಮ ಮುಂದಿನ ಚಿತ್ರದ ಪಾತ್ರಕ್ಕಾಗಿ ಅವರು ಹೀಗೆ ಮಾಡಿಸಿಕೊಂಡಿರಬೇಕು. ರೀಮಾ ಕಾಗ್ತಿ ಎಂಬುವವರು ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದು ಅಮೀರ್ ಖಾನ್ ಮತ್ತು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಹ ನಿರ್ಮಾಣದಲ್ಲಿ ಚಿತ್ರ ಸೆಟ್ಟೇರಲಿದೆಯಂತೆ. ಅದಕ್ಕಾಗಿಯೇ ಈ ಗೆಟಪ್ ಎನ್ನಲಾಗಿದೆ.

  ಅಯ್ಯೋ ಅಷ್ಟೇನಾ! ನಾವೆಲ್ಲೋ ಅಮೀರ್ ಖಾನ್ ತಿರುಪತಿಗೋ ಇಲ್ಲ ಧರ್ಮಸ್ಥಳಕ್ಕೋ ಹೋಗಿದ್ದರೇನೋ ಎಂದುಕೊಂಡೆವು ಎಂದು ಸಿನಿಕರು ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಇರಲಿ ಬಿಡಿ ಅಮೀರ್ ಖಾನ್ ಏನೇ ಮಾಡಿದರು ಫರ್ಫೆಕ್ಟ್ ಆಗಿರುತ್ತದೆ. ಅಂದಹಾಗೆ ಇದು ತೀರಾ ಬೋಡು ಪಾತ್ರ ಅಲ್ಲವಂತೆ.

  English summary
  Bollywood actor Aamir Khan, the Perfectionist, stunned everyone a few years ago by shaving off his hair for Ghajini. Surprisingly, the actor is donning a similar look these days. He has trimmed his hair and is almost bald.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X