»   » ಮನೆಗೆ ಐಶೂಬೇಬಿ ಆಗಮನಕ್ಕೆ ಕಾದಿರುವ ಅಮಿತಾಬ್

ಮನೆಗೆ ಐಶೂಬೇಬಿ ಆಗಮನಕ್ಕೆ ಕಾದಿರುವ ಅಮಿತಾಬ್

Posted By:
Subscribe to Filmibeat Kannada

ಐಶ್ವರ್ಯ ರೈ ಬಚ್ಚನ್ ಮಗಳು ಹಾಗೂ ಸ್ವತಃ ಐಶೂ ಇಬ್ಬರೂ ಚೆನ್ನಾಗಿದ್ದಾರೆ ಎಂದು ಅಮಿತಾಬ್ ಹೇಳಿದ್ದಾರೆ. ಮುದ್ದು ಮುದ್ದಾಗಿರುವ ಮಗುವನ್ನು ನೋಡುತ್ತಾ ತಾವು ಪಕ್ಕದಲ್ಲೇ ಕಾಲ ಕಳೆಯುತ್ತಿರುವುದಾಗಿ ಕೂಡ ಹೇಳಿರುವ ಅಮಿತಾಬ್, ಸದ್ಯದಲ್ಲೇ ಮಗುವನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.

ಬೇಬಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಉಡುಪನ್ನು ಕಾಲಿನ ಬೆರಳುತುದಿಯಿಂದ ಮುಖದವರೆಗೂ ಹಾಕಿ ಮಲಗಿಸಿರುತ್ತಾರೆ. ಹಾಗಾಗಿ ಮಗುವಿನ ಮುಖ ಮಾತ್ರ ನೋಡಿಕೊಂಡು ದಿನವಿಡಿ ಇರಬೇಕು ಎಂದಿದ್ದಾರೆ. ಮಗು ಸಖತ್ ಮುದ್ದಾಗಿದೆ. ಅದರ ಜೊತೆ ನಾನು ಮನೆಯಲ್ಲಿ ಕಾಲ ಕಳೆಯಲು ತೀವ್ರವಾಗಿ ಬಯಸುತ್ತಿದ್ದೇನೆ" ಎಂದಿದ್ದಾರೆ.

ಹಸಿ ಬಾಣಂತಿ ಐಶ್ವರ್ಯ ಈಗ ಆರೋಗ್ಯದಿಂದಿದ್ದು, ಬಾಣಂತಿ ತೆಗೆದುಕೊಳ್ಳಬೇಕಾದ ಕಾಳಜಿ ಹಾಗೂ ಆರೈಕೆಗೆ ಬದ್ಧರಾಗಿದ್ದಾರಂತೆ. ಮಗುವುನ್ನು ಆಸ್ಪತ್ರೆಯಿಂದ ವೈದ್ಯರ ಮಾತಿನಂತೆ ಆದಷ್ಟು ಬೇಗ ಮನೆಗೆ ಕರೆದೊಯ್ಯಲಿದ್ದೇವೆ ಎಂದ ಅಮಿತಾಬ್ ಮಾತು ಎಲ್ಲ ಅಜ್ಜಂದಿರ ಪ್ರತಿನಿಧಿಯ ಮಾತಿನಂತೆ ಗೋಚರಿಸುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ. (ಏಜೆನ್ಸೀಸ್)

English summary
Superstar Amitabh Bachchan is all excited to bring the new-born baby girl of actress Aishwarya Rai Bachchan home. Bollywood actor Big B has revealed that his daughter-in-law and granddaughter are in good health and they will come home soon.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada