For Quick Alerts
  ALLOW NOTIFICATIONS  
  For Daily Alerts

  ಭ್ರಷ್ಟಾಚಾರದ ವಿರುದ್ಧ ತಾರೆ ಕತ್ರಿನಾ ಕೈಫ್ ಸತ್ಯಾಗ್ರಹ

  By Rajendra
  |

  ಬಾಲಿವುಡ್ ತಾರೆ ಕತ್ರಿನಾ ಕೈಫ್ ಆಗಾಗ ವಿಭಿನ್ನ ಪಾತ್ರಗಳನ್ನೂ ಪೋಷಿಸುತ್ತಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇನ್ನೊಂದು ಕಡೆ ಐಟಂ ಡಾನ್ಸ್‌ಗಳಲ್ಲಿ ಮಿಂಚುತ್ತಾ ಪಡ್ಡೆಗಳ ನಿದ್ದೆ ಕೆಡಿಸುತ್ತಿದ್ದಾರೆ. ಇನ್ನು ಮುಂದೆ ಅಭಿನೇತ್ರಿಯಾಗಿ ತನ್ನದೇ ಆದಂತಹ ಛಾಪನ್ನು ಮೂಡಿಸಲು ಕತ್ರಿನಾ ಪಣತೊಟ್ಟಿದ್ದಾರೆ.

  ಈ ಹಿಂದೆ ಆಕೆ ಅಭಿನಯದ 'ರಾಜನೀತಿ' ಚಿತ್ರ ಉತ್ತಮ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಮತ್ತೊಮ್ಮೆ ಅದೇ ರೀತಿಯ ಪಾತ್ರವನ್ನು ಪೋಷಿಸಲು ಕತ್ರಿನಾ ತಹತಹ ಎನ್ನುತ್ತಿದ್ದಾರೆ. ಮತ್ತೊಮ್ಮೆ ಪ್ರಕಾಶ್ ಝಾ ನಿರ್ದೇಶನದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ.

  ಈ ಚಿತ್ರಕ್ಕೆ 'ಸತ್ಯಾಗ್ರಹ್' ಎಂದು ಹೆಸರಿಡಲಾಗಿದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಹೋರಾಟವನ್ನು ಸ್ಫೂರ್ತಿಯಾಗಿಸಿಕೊಂಡು ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಂದು ಪಾತ್ರಕ್ಕೆ ಕತ್ರಿನಾ ಕೈಫ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮತ್ತೊಂದು ಪಾತ್ರಕ್ಕೆ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಆಯ್ಕೆಯಾಗುವ ಸಾಧ್ಯತೆಗಳಿವೆ. (ಏಜೆನ್ಸೀಸ್)

  English summary
  The buzz is that Katrina Kaif has been roped in for Prakash Jha's next, tentatively titled 'Satyagrah'. This is the second film for which the actor-director duo is teaming up again after their last film 'Raajneeti'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X