»   » ಸಲ್ಲುಗೆ ಕಪಾಳಮೋಕ್ಷ ಮಾಡಿದ ದೆಹಲಿ ಹುಡುಗಿ!

ಸಲ್ಲುಗೆ ಕಪಾಳಮೋಕ್ಷ ಮಾಡಿದ ದೆಹಲಿ ಹುಡುಗಿ!

Subscribe to Filmibeat Kannada

ಮದ್ಯದ ಅಮಲಿನಲ್ಲಿದ್ದ ಹುಡುಗಿಯೊಬ್ಬಳು ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಪಾಳಮೋಕ್ಷ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮೆರಿಡಿಯನ್ ಪಂಚತಾರಾ ಹೋಟೆಲ್ ನಲ್ಲಿ ಖಾಸಗಿ ಕಾರ್ಯಕ್ರಮವೊಂದು ನಡೆಯುತ್ತಿತ್ತು . ಕಾರ್ಯಕ್ರಮದಲ್ಲಿ ಕಂಠಪೂರ್ತಿ ಕುಡಿದಿದ್ದ ಮೋನಿಕಾ(20) ಎಂಬಾಕೆ ಸಲ್ಮಾನ್ ಖಾನ್ ಕೆನ್ನೆಗೆ ಬಾರಿಸಿ ಅಲ್ಲಿದ್ದವರನ್ನು ತಬ್ಬಿಬ್ಬುಗೊಳಿಸಿದ್ದಾಳೆ.

ದೆಹಲಿಯ ಶ್ರೀಮಂತ ಬಿಲ್ಡರ್ ಒಬ್ಬರ ಮಗಳಾಗಿರುವ ಮೋನಿಕಾ ವರ್ತನೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಸಲ್ಮಾನ್ ಖಾನ್ ಮೇಲೆ ಕೈಮಾಡಿದ್ದಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿದ್ದ ಬಾಲಿವುಡ್ ತಾರೆಗಳಾದ ಸುಸ್ಮಿತಾ ಸೇನ್, ಸೊಹೇಲ್ ಖಾನ್ ಮತ್ತು ಇತರೆ ಅತಿಥಿಗಳನ್ನು ಮೋನಿಕಾ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಆದರೆ ಈ ಬಗ್ಗೆ ಸಲ್ಲು ಏನನ್ನೂ ಪ್ರತಿಕ್ರಿಯಿಸಿಲ್ಲ. ಆಕೆಯನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸುವಂತೆ ಭದ್ರತಾ ಸಿಬ್ಬಂದಿಗೆ ಆಜ್ಞಾಪಿಸಿದ್ದಾರೆ. ಅವರು ಮೋನಿಕಾರನ್ನು ಗೇಟ್ ನಿಂದ ಹೊರಗೆ ಹಾಕಿದ್ದಾರೆ. ನಂತರ ಸಲ್ಮಾನ್ ಖಾನ್ ತಮ್ಮ ಸಹೋದರ ಸೊಹೈಲ್ ಅವರೊಂದಿಗೆ ಹೊರಡು ಹೋಗಿದ್ದಾಗಿ ಮೂಲಗಳು ತಿಳಿಸಿವೆ.

ಸಂಜನಾ ಜೋನ್ ಅವರ ಫ್ಯಾಷನ್ ಶೋ ಯಶಸ್ವಿಯಾಗಿದ್ದಕ್ಕೆ ಈ ಖಾಸಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬಾಲಿವುಡ್ ತಾರೆಗಳಾದ ಸಲ್ಮಾನ್ ಖಾನ್ ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತನ್ನ ಬಾಯ್ ಫ್ರೆಂಡ್ ಜತೆ ಬಂದ ಮೋನಿಕಾ ಕಾರ್ಯಕ್ರಮಕ್ಕೆ ನುಗ್ಗಿ ಗಲಾಟೆ ಮಾಡುತ್ತಿದ್ದರು. ಏನಾಗುತ್ತಿದೆ ಎಂದು ಸಲ್ಮಾನ್ ಆಕೆಯ ಬಳಿ ಬಂದು ವಿಚಾರಿಸಿದಾಗ ಆಕೆ ಇದ್ದಕ್ಕಿದ್ದಂತೆ ಸಲ್ಲು ಕೆನ್ನೆಗೆ ಬಾರಿಸಿದ್ದಾಳೆ.

ಈ ಘಟನೆಯಿಂದ ಸಂಯಮ ಕಳೆದುಕೊಳ್ಳದ ಸಲ್ಮಾನ್ ಆಕೆಯನ್ನು ಕಾರ್ಯಕ್ರಮದಿಂದ ಹೊರಗೆ ಹೋಗುವಂತೆ ವಿನಂತಿಸಿಕೊಂಡಿದ್ದಾರೆ. ಆಕೆ ಅಷ್ಟಕ್ಕೂ ಬಗ್ಗದಿದ್ದಾಗ ಸೆಕ್ಯುರಿಟಿಗಳಿಗೆ ಹೇಳಿ ಆಕೆಯನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಿದ್ದಾನೆ. ಸುಸ್ಮಿತಾ ಸೇನ್, ರಿಯಾ ಸೇನ್, ಅಮಾನ್ ಮತ್ತು ಅಯಾನ್ ಆಲಿ ಖಾನ್ ಈ ಘಟನೆಯಿಂದ ಕಸಿವಿಸಿಗೊಂಡಿದ್ದಾಗಿ ಬಾಲಿವುಡ್ ಮೂಲಗಳು ಸ್ಪಷ್ಟಪಡಿಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada