»   »  ಮಕದ್ದರ್ ಕಾ ಸಿಕಂದರ್ ಖ್ಯಾತಿಯ ಮೆಹ್ರಾ ನಿಧನ

ಮಕದ್ದರ್ ಕಾ ಸಿಕಂದರ್ ಖ್ಯಾತಿಯ ಮೆಹ್ರಾ ನಿಧನ

Subscribe to Filmibeat Kannada
Veteran filmmaker Prakash Mehra passes away
ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಮೆಹ್ರಾ(69) ಭಾನುವಾರ ಸಾವಪ್ಪಿದ್ದಾರೆ. ದೀರ್ಘಕಾಲದಿಂದ ಅಸ್ತಸ್ಥರಾಗಿದ್ದ ಅವರು ನ್ಯುಮೋನಿಯ ಮತ್ತು ಅಂಗಾಂಗಗಳ ವೈಫಲ್ಯದಿಂದಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಎಪ್ಪತ್ತರ ದಶಕದಲ್ಲಿ ಅಮಿತಾಬ್ ಬಚ್ಚನ್ ಮತ್ತು ಮೆಹ್ರಾ ಜೋಡಿಯ 'ಝಂಜೀರ್' ಚಿತ್ರ ಇತಿಹಾಸ ನಿರ್ಮಿಸಿತ್ತು. ನಂತರ ಅಮಿತಾಬ್, ಮೆಹ್ರಾ ಜೋಡಿಯ ಆರು ಚಿತ್ರಗಳು ಬಾಕ್ಸಾಫೀಸಲ್ಲಿ ದಾಖಲೆ ಸೃಷ್ಟಿಸಿದ್ದವು. 1989ರಲ್ಲಿ ತೆರೆಕಂಡ ಇವರಿಬ್ಬರ ಜೋಡಿಯ ಮತ್ತೊಂದು ಚಿತ್ರ 'ಜಾದೂಗಾರ್' ಬಾಕ್ಸಾಫೀಸಲ್ಲಿ ಮುಗ್ಗರಿಸಿತ್ತು. ನಂತರದ ದಿನಗಳಲ್ಲಿ ಅಮಿತಾಬ್ ಮತ್ತು ಮೆಹ್ರಾ ಸಂಬಂಧ ಹಳಸಿದೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಆದರೆ ಅಮಿತಾಬ್ ಬಚ್ಚನ್ ಈ ಸುದ್ದಿಗಳನ್ನು ಅಲ್ಲಗಳೆದಿದ್ದರು.

'ಜಂಜೀರ್' ಚಿತ್ರವನ್ನು ಹೊರತುಪಡಿಸಿದರೆ ಮಕದ್ದರ್ ಕಾ ಸಿಕಂದರ್, ಲಾವಾರಿಸ್, ನಮಕ್ ಹಲಾಲ್, ಶರಾಬಿ, ಹೇರಾ ಫೇರಿ...ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಮೆಹ್ರಾ ಅವರ ಸಿನಿ ಪಯಣ 1950ರಲ್ಲಿ ಆರಂಭವಾಯಿತು. 'ಮೇಲಾ' ಎಂಬ ಚಿತ್ರದ ಮೂಲಕ ಫಿರೋಜ್ ಖಾನ್ ಮತ್ತು ಸಂಜಯ್ ಖಾನ್ ಸಹೋದರರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಖ್ಯಾತಿ ಮೆಹ್ರಾ ಅವರದು.

ಚಿತ್ರೋದ್ಯಮಕ್ಕೆ ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ನೀಡಿದ ಕೊಡುಗೆಗಾಗಿ ಅವರಿಗೆ 2006 ಮತ್ತು 2008ರಲ್ಲಿ ಎರಡು ಬಾರಿ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. 1996ರಲ್ಲಿ ರಾಜ್ ಕುಮಾರ್ ಅವರ ಪುತ್ರ ಪುರುರಾಜ್ ಕುಮಾರ್ ಅಭಿನಯದ 'ಬಾಲ್ ಬ್ರಹ್ಮಚಾರಿ' ಮೆಹ್ರಾ ನಿರ್ದೇಶನದ ಕೊನೆಯ ಚಿತ್ರ.

(ಏಜೆನ್ಸೀಸ್)

ನಟ, ನಿರ್ದೇಶಕ ಫಿರೋಜ್ ಖಾನ್ ನಿಧನ
ರಾಜ್ ಅಭಿಮಾನಿಯಾಗಿದ್ದ ಫಿರೋಜ್ ಖಾನ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada