»   » ರಾಖಿ ಬಿಕ್ಕಿಬಿಕ್ಕಿ ಅತ್ತಳು! ಸಾಯಿಪ್ರಕಾಶ್ ಅಲ್ಲಿರಲಿಲ್ಲ!

ರಾಖಿ ಬಿಕ್ಕಿಬಿಕ್ಕಿ ಅತ್ತಳು! ಸಾಯಿಪ್ರಕಾಶ್ ಅಲ್ಲಿರಲಿಲ್ಲ!

Subscribe to Filmibeat Kannada

ವಿವಾದಗಳ ಮುಖಾಂತರವೇ ಸುದ್ದಿಯಲ್ಲಿರುವ, ಹೆಸರಿಗಾಗಿಯೇ ತನ್ನ ಸುತ್ತ ವಿವಾದಗಳ ಹೆಣೆದುಕೊಳ್ಳುವ ಐಟಂ ಗರ್ಲ್ ರಾಖಿ ಸಾವಂತ್ ನಡೆ ಮತ್ತು ನುಡಿ ಎರಡು ಸಕತ್ತು ಹಾಟ್ ! ಆದರೆ ಬಹುಮಂದಿಗೆ ಗೊತ್ತಿಲ್ಲದ ರಾಖಿಯ ಇನ್ನೊಂದು ಮುಖ ಬೇರೆಯೇ ಇದೆ.

ಕನಿಷ್ಠ ಉಡುಗೆ ತೊಟ್ಟು, ಮಾದಕವಾಗಿ ಅಂಗಾಂಗಗಳ ಕುಣಿಸುತ್ತ ಕಣ್ ನೋಟದಲ್ಲೇ ಪಡ್ಡೆಗಳ ಕೆಣಕುವ ರಾಖಿ, ಮೊನ್ನೆ ಬಿಕ್ಕಿಬಿಕ್ಕಿ ಅತ್ತರು. ಅವರ ಕಣ್ಣುಗಳು ಕಣ್ಣೀರ ಕೊಳಗಳಾಗಿದ್ದವು! ಇದು ಯಾವುದೋ ಚಿತ್ರಕ್ಕಾಗಿ ಗ್ಲಿಸರಿನ್ ಲೇಪಿಸಿಕೊಂಡ ಅತ್ತ ಪ್ರಸಂಗವಲ್ಲ. ಬುದ್ಧಿಮಾಂಧ್ಯ ಮಕ್ಕಳ ಸ್ಥಿತಿ ಕಂಡು, ರಾಖಿ ರೋಧಿಸಿದ ಪರಿ. ಮುಂಬೈನಲ್ಲಿ ಲಯನ್ಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಖಿ, ಕಣ್ಣೀರು ಸುರಿಸಿದಳು.

ರಾಖಿ ಕಣ್ಣೀರು ಹಾಕಿದ ಕಾರ್ಯಕ್ರಮದಲ್ಲಿ ನಮ್ಮ ಎಸ್.ನಾರಾಯಣ್ ಅಥವಾ ಸಾಯಿಪ್ರಕಾಶ್ ಇದ್ದಿದ್ದರೇ, ತಮ್ಮ ಮುಂದಿನ ಕರವಸ್ತ್ರದ ಚಿತ್ರಗಳಿಗೆ, ಈಯಮ್ಮನನ್ನೇ ನಾಯಕಿಯನ್ನಾಗಿ ಆಯ್ಕೆಮಾಡುತ್ತಿದ್ದರೋ ಏನೋ? ಆ ವಿಷಯ ಬಿಡಿ. ಅಂದ ಹಾಗೆ, ಈಯಮ್ಮ ಅತ್ತಿದ್ದು ಇದೇ ಮೊದಲೇನಲ್ಲ. ಹಿಂದೆ ಇಂಥ ಪ್ರಕರಣಗಳು ನಡೆದಿವೆ. ಮಾಧ್ಯಮಗಳಿಗೆ ಇಂಥ ಸುದ್ದಿ ಪ್ರಕಟಿಸುವುದಕ್ಕೆ, ರಾಖಿ ಕಣ್ಣೀರು ಸುರಿಸೋ ಫೋಟೊಗಳ ಪ್ರಕಟಿಸುವುದಕ್ಕೆ ಅಷ್ಟು ಇಷ್ಟವಿಲ್ಲ.

ಮಕ್ಕಳ ಕಂಡರೆ ರಾಖಿಗೆ ಬಲುಬಲು ಪ್ರೀತಿ. ರಿಯಾಲಿಟಿ ಶೋನಲ್ಲಿ ಗಳಿಸಿದ ಎಲ್ಲಾ ಹಣವನ್ನು ಒಷಿವಾರಾದ ಮುನಿಸಿಪಲ್ ಶಾಲೆಗೆ ಈ ಹಿಂದೆ ಆಕೆ ನೀಡಿದ್ದಳು.ಜ್ಞಾನ ಸಾಗರ್ ವಿದ್ಯಾಮಂದಿರಕ್ಕೆ ಕಂಪ್ಯೂಟರ್ ಕೊಡಿಸಿ, ಹೊಸ ಇಮೇಜ್ ಸೃಷ್ಟಿಸಿಕೊಂಡಿದ್ದಳು. ಜೈಲಿನಲ್ಲಿರುವ ಕೈದಿಗಳಿಗೆ ಕಂಪ್ಯೂಟರ್ ಮತ್ತು ರಗ್ಗುಗಳ ಕೊಡಿಸಿದರೂ, ಕೈದಿಗಳ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಐಟಂ ಹುಡುಗಿಯ ನೋಡಿದರೆ ಕೈದಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಆತಂಕ ಜೈಲಿನ ಅಧಿಕಾರಿಗಳಿಗೆ.

ಇದು ನಿಜ! ಐಟಂ ಗರ್ಲ್ ರಾಖಿ, ಈಗ ನಾಯಕಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada