»   »  ಪ್ರಧಾನಿಯಾಗಿ ನಟ ಅಮೀರ್ ಖಾನ್?

ಪ್ರಧಾನಿಯಾಗಿ ನಟ ಅಮೀರ್ ಖಾನ್?

Posted By:
Subscribe to Filmibeat Kannada

'ಲಗಾನ್' ಚಿತ್ರದಲ್ಲಿ ದೇಶಪ್ರೇಮಿಯಾಗಿ ಅಮೀರ್ ಅಭಿಮಾನಿಗಳ ಮನ ಸೂರೆಗೊಂಡಿದ್ದರು. ಇದೀಗ ಸ್ವತಂತ್ರ ಭಾರತದ ರಾಜಕೀಯ ನಾಯಕನಾಗಿ ಅಮೀರ್ ದರ್ಶನ ನೀಡಲಿದ್ದಾರೆಯೇ? ದೇಶಪ್ರೇಮ ಉಕ್ಕಿಸುವ ಚಿತ್ರಗಳಿಗೆ ಹೆಸರಾದ ಮನೋಜ್ ಕುಮಾರ್ ಚಿತ್ರಕತೆಯೊಂದನ್ನು ಸಿದ್ಧಪಡಿಸಿದ್ದು ಅಮೀರ್ ಅವರನ್ನು ಭಾರತದ ಮಾಜಿ ಪ್ರಧಾನಿಯಾಗಿಸುವ ಉತ್ಸಾಹದಲ್ಲಿದ್ದಾರೆ.

ಬಾಲಿವುಡ್ ನಟ, ನಿರ್ದೇಶಕ ಮತ್ತ್ತು ನಿರ್ಮಾಪಕರಾಗಿ ಮನೋಜ್ ಸಾಕಷ್ಟು ದೇಶಪ್ರೇಮದ ಚಿತ್ರಗಳನ್ನು ಕೊಟ್ಟಿದ್ದಾರೆ. ಸ್ವತಂತ್ರ ಭಾರತದ ಮೂರನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕತೆಯನ್ನು ತೆರೆಗೆ ತರುವ ತವಕದಲ್ಲಿದ್ದಾರೆ. ಇದಕ್ಕಾಗಿ ಈಗಾಗಲೇ ಚಿತ್ರಕತೆಯನ್ನು ಸಿದ್ಧಪಡಿಸಿದ್ದು ಅಮೀರ್ ಅವರನ್ನು ಸಂಪರ್ಕಿಸಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ ಪಾತ್ರಅಮೀರ್ ಗೆ ಒಪ್ಪುತ್ತದೆ. ಹಾಗಾಗಿ ಈ ಚಿತ್ರಕ್ಕೆ ನಾಯಕ ನಟ ಅವರೇ ಎನ್ನುತ್ತಾರೆ ಮನೋಜ್. ಅಮೀರ್ ಒಪ್ಪಿಗೆ ಮಾತ್ರ ಬಾಕಿ ಇದೆ. ಒಂದು ವೇಳೆ ಅಮೀರ್ ಒಪ್ಪಿದರೂ ಚಿತ್ರ ತೆರೆ ಬರುವ ವೇಳೆಗೆ ಎರಡು ವರ್ಷಗಳೇ ಆಗಬಹುದು. ಅಮೀರ್ ಆ ಪಾತ್ರಕ್ಕೆ ಒಗ್ಗಿಕೊಳ್ಳಲು,ಜೀವ ತುಂಬಲು ಇಷ್ಟು ಸಮಯ ಬೇಕಾಗುತ್ತ್ತದೆ ಎನ್ನುತ್ತಾರೆ ಬಾಲಿವುಡ್ ಪಂಡಿತರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X