For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ದಾರಿಯಲ್ಲಿ ಶಾರುಖ್ ವಿರುದ್ಧ ಅಮೀರ್ ನಡೆ

  |

  ಬಾಲಿವುಡ್ ತ್ರೀ ಖಾನ್ ಸ್ಟಾರ್ ಗಳಲ್ಲಿ ಶಾರುಖ್ ಖಾನ್ ಕಂಡರೆ ಉಳಿದಿಬ್ಬರು ಸ್ಟಾರ್ ಗಳಿಗೆ ಏನೋ ಒಂಥರಾ. ಶಾರುಖ್ ಅವರನ್ನು ಅವಮಾನಿಸುವ ಅವಕಾಶವನ್ನು ಬಾಲಿವುಡ್ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ ಅವರಂತೂ ಬಿಡುವುದೇ ಇಲ್ಲ. ಇದೀಗ ಅಮೀರ್ ಖಾನ್, ಸಲ್ಮಾನ್ ದಾರಿಯಲ್ಲಿ ಸಾಗುತ್ತಿದ್ದಾರೆ.

  ಟೆಲಿ ಶೋ 'ಸತ್ಯಮೇವ ಜಯತೆ' ಉದ್ಘಾಟನಾ ಸಮಾರಂಭದ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಅಮಿರ್ ಖಾನ್, ಶಾರುಖ್ ಬಗ್ಗೆ ಕೇಳಲಾದ ಪ್ರಶ್ನೆಗೆ ಅಸಡ್ಡೆ ವ್ಯಕ್ತಪಡಿಸಿದರು. ಅಮೀರ್ ಹೇಳಿದ ಮಾತು "ನಾನು ಅಮಿತಾಬ್ ರ 'ಕೌನ್ ಬನೇಗಾ ಕರೋಡ್ ಪತಿ' ಅಭಿಮಾನಿ. ಹೃತಿಕ್ ಡಾನ್ಸ್ ಶೋ ಹಾಗೂ ಸಲ್ಮಾನ್ ರ 'ದಸ್ ಕಾ ದಮ್' ಕಾರ್ಕ್ರಮಗಳನ್ನು ನೋಡಿ ಬಹಳಷ್ಟು ಎಂಜಾಯ್ ಮಾಡಿದ್ದೇನೆ. ಆದರೆ 'ಬಿಗ್ ಬಾಸ್' ನೋಡಿಲ್ಲ" ಎಂದಿದ್ದಾರೆ.

  ಕೆಬಿಸಿ ಮೂರನೇ ಆವೃತ್ತಿ ಹಾಗೂ 'ಜೋರ್ ಕಾ ಜಟಕಾ', ಕ್ಯಾ ಆಪ್ ಪಾಂಚವಿ ಪಾಸ್ ಸೇ ತೇಜ್ ಹೈ' ಯನ್ನು ಹೋಸ್ಟ್ ಮಾಡಿದ ಶಾರುಖ್ ಬಗ್ಗೆ ಪ್ರತ್ಯೇಕವಾಗಿ ಕೇಳಲಾಗಿ "ನಾನು ಗೇಮ್ ಶೋದಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ, ಆದರೆ ಅದನ್ನು ಹೋಸ್ಟ್ ಮಾಡಲು ನನಗಿಷ್ಟವಿಲ್ಲ" ಎನ್ನುವ ಮೂಲಕ ಶಾರುಖ್ ಬಗ್ಗೆ ಹೇಳುವುದನ್ನು ತಪ್ಪಸಿಕೊಂಡಿದ್ದಾರೆ. ಇವೆಲ್ಲ ಎಲ್ಲಿಯವರೆಗೋ..! (ಏಜೆನ್ಸೀಸ್)

  English summary
  Aamir Khan, who is all set to launch his television show Satyamev Jayate avoided talking about Shahrukh Khan at a recent press conference.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X