For Quick Alerts
  ALLOW NOTIFICATIONS  
  For Daily Alerts

  ರು.13 ಕೋಟಿ ಪಡೆಯುವ ಬಾಲಿವುಡ್ ಸಿನಿಮಾ ನಟಿ!

  By Rajendra
  |

  ಕೆಲವು ಸಿನಿಮಾ ತಾರೆಗಳ ಚಿತ್ರ ಸೋತರು ಅವರ ಸಂಭಾವನೆಗೆ ಮಾತ್ರ ಹೊಡೆತ ಬೀಳುವುದಿಲ್ಲ. ಇದೇ ಕ್ಯಾಟಗರಿಗೆ ಸೇರುತ್ತಾರೆ ಮೆಕ್ಸಿಕನ್ ತಾರೆ ಬಾರ್ಬರಾ ಮೋರಿ. ಈಕೆ ಹೃತಿಕ್ ರೋಷನ್ ಜೊತೆ ನಟಿಸಿದ 'ಕೈಟ್ಸ್ ' ಚಿತ್ರ ಬಾಕ್ಸಾಫೀಸಲ್ಲಿ ಅಂಗಾತ ಮಲಗಿತು. ಆದರೂ ಈಕೆಯ ಸಂಭಾವನೆ ಮಾತ್ರ ಕೋಟಿಗಳಲ್ಲೇ ಇದೆ. ತಮ್ಮ ಹೊಸ ಚಿತ್ರಕ್ಕೆ ಈಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೆ?

  'ಫೀವರ್' ಎಂಬ ಹೆಸರಿನ ಚಿತ್ರಕ್ಕೆ ಈಕೆ ಪಡೆಯುತ್ತಿರುವ ಸಂಭಾವನೆ ರು.13 ಕೋಟಿಗೂ ಅಧಿಕ ಎನ್ನುತ್ತವೆ ಮೂಲಗಳು. ರಾಜೀವ್ ಖಾಂಡೇಲ್‌‍ವಾಲ್ ಜೊತೆ ಈಕೆ ಅಭಿನಯಿಸಲಿದ್ದಾರೆ. ರವಿ ಅಗರವಾಲ್ ನಿರ್ಮಿಸುತ್ತಿರುವ ಚಿತ್ರಕ್ಕೆ ರಾಜೀವ್ ಝವೇರಿ ಆಕ್ಷನ್, ಕಟ್ ಹೇಳುತ್ತಿದ್ದಾರೆ.

  ಅಂದಹಾಗೆ ದುಡ್ಡಿನ ಆಸೆಯಿಂದ ತಾವು ಚಿತ್ರವನ್ನು ಒಪ್ಪಿಕೊಂಡಿಲ್ಲ. ಚಿತ್ರಕತೆ ಅಷ್ಟೊಂದು ಚೆನ್ನಾಗಿದೆ ಹಾಗಾಗಿ ಈ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎನ್ನುತ್ತಾರೆ ಬಾರ್ಬರಾ. 'ಕೈಟ್ಸ್' ಚಿತ್ರಕ್ಕೆ ಹೋಲಿಸಿದರೆ 'ಫೀವರ್' ಚಿತ್ರಕತೆ ತುಂಬಾ ವಿಭಿನ್ನವಾಗಿದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ ಎಂದಿದ್ದಾರೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಯಲಿದೆ.

  English summary
  The Mexican actress Barbara Mori, who starred opposite Hrithik Roshan in ’Kites’, has reportedly been signed for a whopping $300,000 (over Rs.13 crore) for ’Fever’, in which she will team up with Rajeev Khandelwal.The Hindi film will be directed by Rajeev Jhaveri and produced by Ravi Agrawal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X