»   » ಮಹಿಳೆ, ಪುರುಷರಿಂದ ಹೃತಿಕ್ ಮುಖಕ್ಕೆ ಮುತ್ತಿನ ಮಳೆ

ಮಹಿಳೆ, ಪುರುಷರಿಂದ ಹೃತಿಕ್ ಮುಖಕ್ಕೆ ಮುತ್ತಿನ ಮಳೆ

Posted By:
Subscribe to Filmibeat Kannada
Hrithik Roshan
ಬಾಲಿವುಡ್ ಹ್ಯಾಂಡ್ ಸಮ್ ಬಾಯ್ ಹೃತಿಕ್ ರೋಶನ್ ಅಂದರೆ ಮಹಿಳಾಮಣಿಗಳಿಗೆ ಅಚ್ಚು ಮೆಚ್ಚು. ಕಾಲೇಜು ಹುಡುಗಿಯರಿಗೆ ಹೆಚ್ಚು ಹುಚ್ಚು. ಹುಡುಗರಿಗೂ ಕೂಡ ಹೃತಿಕ್ ಬಾಡಿ ರೋಲ್ ಮಾಡೆಲ್. ಇದೀಗ ಸಿಕ್ಕಿರುವ ಸುದ್ದಿ ಪ್ರಕಾರ ಹೃತಿಕ್ ಮುಖಕ್ಕೆ ಶೇ. 20 ರಷ್ಟು ಪುರುಷರು ಮುತ್ತಿಕ್ಕುತ್ತಾರೆ. ಗಾಬರಿ ಆಗಬೇಡಿ. ವಿಷಯ ಇನ್ನೂ ಇದೆ.

ಉಳಿದ ಶೇ. 80 ರಷ್ಟು ಕಿಸ್ ಪಾಲು, ಮಹಿಳೆಯರು ಮತ್ತು ಮಕ್ಕಳದ್ದು. ಹೃತಿಕ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ನಟ. ಬಾಲಿವುಡ್ ನಟನಾದರೂ ಹಾಲಿವುಡ್ ನಟರ ಖ್ಯಾತಿಯ ಸಾಲಿಗೆ ನಿಲ್ಲಬಲ್ಲವ. ಇವರಿಗೆ ಕಿಸ್ ಕೊಡಬೇಕೆನಿಸುವುದು ಸಹಜವೇ. ಜನ ಹೋಗಿ ಹೋಗಿ ಕಿಸ್ ಕೊಡುತ್ತಿದ್ದಾರೆ. ಆದರೆ ಹೃತಿಕ್ ಯಾಕೆ ಅಲ್ಲೇ ನಿಂತು ಎಲ್ಲರಿಗೂ ಸಿಕ್ಕಿಹಾಕಿಕೊಳ್ಳುತ್ತಾರೆ?

ಪಾಪ, ಅವರಿಗೇ ಗೊತ್ತಿಲ್ಲದೇ ಅವರಿಗೆ ಮುತ್ತಿಕ್ಕುತ್ತಾರೆ. ಕಾರಣ ಅದು 'ಟುಸ್ಸಾಡ್ ಮ್ಯೂಸಿಯಂ'ನಲ್ಲಿರುವ ಹೃತಿಕ್ ಮೇಣದ ಪ್ರತಿಮೆ. ಅಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ಸ್ಟಾರ್ ಗಳ 'ವ್ಯಾಕ್ಸ್' ಮೂರ್ತಿಗಳಿವೆ. ಅವುಗಳಲ್ಲಿ ಅತಿ ಹೆಚ್ಚು ಆಕರ್ಷಿಸುವುದು ಹೃತಿಕ್ ಪ್ರತಿಮೆಯಂತೆ. ಜನರು ಅಭಿಮಾನವನ್ನು ಮುತ್ತಿನ ಮೂಲಕ ತೋರಿಸುತ್ತಿದ್ದಾರಂತೆ. ಅದಕ್ಕೇ ಹೃತಿಕ್ ಪತ್ನಿ ಸೂಸಾನ್, ಕಂಗಾಲಾಗದೇ 'ಕೂಲ್' ಆಗಿದ್ದಾಳೆ. (ಏಜೆನ್ಸೀಸ್)

English summary
Bollywood star Hrithik Roshan gets the highest Kisses from the visitors for his wax statue at the Madame Tussauds in London. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada