»   » ಮದುವೆ ಪಾರ್ಟಿಗಳಲ್ಲಿ ಕರೀನಾ 'ನೋ ಡಾನ್ಸ್'

ಮದುವೆ ಪಾರ್ಟಿಗಳಲ್ಲಿ ಕರೀನಾ 'ನೋ ಡಾನ್ಸ್'

Posted By:
Subscribe to Filmibeat Kannada

ಸಾಕಷ್ಟು ವೇದಿಕೆಗಳಲ್ಲಿ ಡಾನ್ಸ್ ಮಾಡಿರುವ ನಟಿ ಕರೀನಾ ಕಪೂರ್, ಯಾವುದೇ ಕಾರಣಕ್ಕೂ ಮದುವೆ ಪಾರ್ಟಿಗಳಲ್ಲಿ ನೃತ್ಯ ಮಾಡುವುದಿಲ್ಲವಂತೆ. ಅಪ್ಸರಾ ಅವಾರ್ಡ್ ಫಂಕ್ಷನ್ ವೇದಿಕೆಯಲ್ಲಿ ಡಾನ್ಸ್ ಮಾಡಿದ ನಂತರ ಈ ಮಾತನ್ನು ಹೇಳಿರುವ ಕರೀನಾ ಮಾತನ್ನು ಬೇರೆ ನಟಿಯರು ಯಾವ ರೀತಿ ಅ(ಪಾ)ರ್ಥ ಮಾಡಿಕೊಳ್ಳುತ್ತಾರೋ!

ಅಪ್ಸರಾ ಅವಾರ್ಡ್ ನಲ್ಲಿ 'ರಾನ್ ಒನ್' ಚಿತ್ರದ 'ಚಮಕ್ ಚಲ್ಲೋ' ಗೀತೆ ಹಾಗೂ ತೆಲುಗು 'ಆರ್ಯ-2' ಚಿತ್ರದ 'ರಿಂಗ ರಿಂಗ' ಗೀತೆಗೆ ಕರೀನಾ ಹೆಜ್ಜೆ ಹಾಕಿದ್ದಾರೆ. ನಂತರ ನಕ್ಕಾ ಮಕ್ಕಾ ಹಾಡಿಗೆ ನರ್ತಿಸಿದ ಕರೀನಾ, ಸದ್ಯದ ಸೆನ್ಸೇಷನ್ ತಮಿಳು ಗೀತೆ 'ಕೊಲವೆರಿ ಡಿ' ಗೀತೆಗೆ ನಾನು ಹೀಗೆ ಹೆಜ್ಜೆ ಹಾಕುತ್ತೇನೆ ಎಂದು ತೋರಿಸಿದರು.

"ನಾನು ಸಾಕಷ್ಟು ಡಾನ್ಸ್ ಮಾಡುತ್ತೇನೆ, ವೇದಿಕೆಗಳಲ್ಲಿ ಹೆಜ್ಜೆ ಹಾಕುತ್ತೇನೆ. ಆದರೆ ಮದುವೆ ಪಾರ್ಟಿಗಳಲ್ಲಿ ಮಾತ್ರ ಕುಣಿಯಲಾರೆ" ಎಂದು ಖಡಾಖಂಡಿತವಾಗಿ ಹೇಳಿರುವ ಕರೀನಾ ಮಾತು ಈಗ ಸಾಕಷ್ಟು ಚರ್ಚೆಗೆ ಗುರಿಯಾಗುವ ಸಾಧ್ಯತೆಗಳಿವೆ. ಆದರೆ ಕರೀನಾ ಬಾಲಿವುಡ್ ಟಾಪ್ ಹೀರೋಯಿನ್. ನುಡಿದಂತೆ ನಡೆಯುವ ಸಾಮರ್ಥ್ಯವಿದೆ. (ಏಜೆನ್ಸೀಸ್)

English summary
Kareena Kapoor, who set the stage on fire at two award functions, said that though she loves to dance on stage and make some good money, she would never dance for weddings.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada