For Quick Alerts
  ALLOW NOTIFICATIONS  
  For Daily Alerts

  ಹಾಟ್ ಐಟಂ ಸಾಂಗ್ ನಲ್ಲಿ 'ಡರ್ಟಿ' ವಿದ್ಯಾ ಬಾಲನ್

  |

  ಮತ್ತೊಮ್ಮೆ ವಿದ್ಯಾ ಬಾಲನ್ ಸುದ್ದಿಯಾಗುತ್ತಿದ್ದಾರೆ. ಕಾರಣ ಇನ್ನೊಂದು 'ಡರ್ಟಿ' ಪಿಕ್ಚರ್ ಅಲ್ಲ, ಐಟಂ ಸಾಂಗ್. ದಿ ಡರ್ಟಿ ಪಿಕ್ಚರ್ ಮೂಲಕ ವಿದ್ಯಾ ಬಾಲನ್ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಳಾಗಿದ್ದು ಗೊತ್ತೇ ಇದೆ. ಹೋದಲ್ಲಿ ಬಂದಲ್ಲಿ ವಿದ್ಯಾ ಪಡ್ಡೆಗಳ ಹಾಟ್ ಕೇಕ್ ಎನಿಸಿಕೊಂಡಿದ್ದಾಗಿದೆ. ಆಕೆಯ ಸಂಭಾವನೆ ಬರೋಬ್ಬರಿ ಏಳು ಕೋಟಿಗೆ ಏರಿದೆ. ಹೀಗಿರುವ ವಿದ್ಯಾ ಇದೀಗ ಐಟಂ ಸಾಂಗ್ ಒಂದರಲ್ಲಿ ಹೆಜ್ಜೆಹಾಕುತ್ತಿದ್ದಾರೆ.

  ವಿದು ವಿನೋದ್ ಛೋಪ್ರಾ ನಿರ್ಮಾಣ ಹಾಗೂ ರಾಜೇಶ್ ಮಾಪೂಸ್ಕರ್ ನಿರ್ದೇಶನದ 'ಫೆರಾರಿ ಕೀ ಸವಾರಿ' ಚಿತ್ರದಲ್ಲಿ ವಿದ್ಯಾ ಸಖತ್ ಹಾಟ್ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. "ವಿನೋದ್ ಮೇಲಿನ ಗೌರವದಿಂದ ನಾನು ಇದನ್ನು ಒಪ್ಪಿಕೊಂಡಿದ್ದೇನೆ. ಅವರು ಒಂಥರಾ ಇನ್ಸಿಟ್ಯೂಟ್ ಇದ್ದಂತೆ. ಅವರ ಜೊತೆ ಕೆಲಸ ಮಾಡುವುದೇ ಖುಷಿ: ಎಂದಿದ್ದಾರೆ.

  ವಿದ್ಯಾಗೆ ವಿನೋದ್ ಜತೆ ಕೆಲಸ ಮಾಡುವುದು ಖುಷಿಯಾದರೆ ಪ್ರೇಕ್ಷಕರಿಗೆ ಮತ್ತೆ ವಿದ್ಯಾ ಹಾಟ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಾಚಾರ ಖುಷಿ ಕೊಟ್ಟಿದೆಯಂತೆ. ಡಿ ಡರ್ಟಿ ಪಿಕ್ಚರ್ ನಲ್ಲಿ ವಿದ್ಯಾ ಮೈಮಾಟ ನೋಡಿದವರು ಅದನ್ನು ಇನ್ನೂ ಮರೆತಿಲ್ಲ. ಆಗಲೇ ಮತ್ತೊಮ್ಮೆ ವಿದ್ಯಾ 'ಶಾಕ್' ಕೊಡಲು ರೆಡಿ. ಪ್ರೇಕ್ಷಕರು ತುದಿಗಾಲಲ್ಲಿದ್ದಾರೆ ಬಿಡಿ...(ಏಜೆನ್ಸೀಸ್)

  English summary
  Actress Vidya Balan acts in a Item Song of Ferrari Ki Sawari Bollywood movie. Vidhu Vinod Chopra Produces and Rajesh Mapuskar directs this.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X