ಟಿವಿ ಅಧಿಕಾರಿಯನ್ನು ದೋಚಿದ ಬಾಲಿವುಡ್ ನಟಿ ಅಂಡ್ ಗ್ಯಾಂಗ್

ಆರು ಜನ ಕಳ್ಳರ ಗುಂಪಿನ ಜೊತೆ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನನ್ನು ವಿಜಯ್ ತಿವಾರಿ ಎಂದು ಗುರುತಿಸಲಾಗಿದೆ.
ಗೋವಿಂದ್ ಮಧ್ಯಾಹ್ನದ ಹೊತ್ತು ಮನೆಗೆ ಹೋಗುತ್ತಿದ್ದಾಗ ವಿಜಯ್ ರಸ್ತೆ ಮಧ್ಯದಲ್ಲಿ ಕಾರು ನಿಲ್ಲಿಸಿದ್ದಾನೆ. ವಿಜಯ್ ಪರಿಚಯವಿದ್ದ ಕಾರಣ ಗೋವಿಂದ್ ಕೆಳಗಿಳಿದು ಮಾತನಾಡಲು ಬಂದಿದ್ದಾನೆ.
ಈ ಸಂದರ್ಭದಲ್ಲಿ ಬಾಲಿವುಡ್ ನಟಿಯನ್ನು ಒಳಗೊಂಡಿದ್ದ ಆರು ಜನರ ಗ್ಯಾಂಗ್ ಕಾರಿನಲ್ಲಿದ್ದ 89,000 ರು ನಗದು, ಚಿನ್ನದ ರಿಂಗ್ ಹಾಗೂ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದಾರೆ. ನಂತರ ಗೋವಿಂದ್ ಅವರ ಎಟಿಎಂ ಕಾರ್ಡ್ ಬಳಸಿ ಹಣ ತೆಗೆಯಲು ಯತ್ನಿಸಿ ವಿಫಲರಾಗಿದ್ದಾರೆ.
ಬಾಲಿವುಡ್ ನಟಿ ಇನ್ನೂ ನಾಪತ್ತೆಯಾಗಿದ್ದು, ಉಳಿದ ಆರೋಪಿಗಳಿಗಾಗಿ ಕೂಡಾ ಶೋಧ ನಡೆದಿದೆ. ನಟಿ ಬಗ್ಗೆ ವಿವರಗಳನ್ನು ಬಹಿರಂಗಪಡಿಸು ಪೊಲೀಸರು ನಿರಾಕರಿಸಿದ್ದಾರೆ.
More from Filmibeat
English summary
"An actress has been accused of involving in a robbery (dacoity) case in Mumbai. Crime Branch arrested some of her gang members and handed them over to police. Read full article.


Click it and Unblock the Notifications











