»   »  ಸ್ಲಂಡಾಗ್ ಮಿಲಿಯನೇರ್ ಬಾಲನಟಿ ಮಾರಾಟಕ್ಕೆ?

ಸ್ಲಂಡಾಗ್ ಮಿಲಿಯನೇರ್ ಬಾಲನಟಿ ಮಾರಾಟಕ್ಕೆ?

Posted By:
Subscribe to Filmibeat Kannada
Did Rubina's father try to sell her?
'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಾಲನಟಿ ರುಬಿನಾ ಅಲಿ ಖುರೇಷಿಯರನ್ನು ಆಕೆಯ ತಂದೆ ದುಬೈ ಶೇಖ್ ರಿಗೆ ರು.2 ಲಕ್ಷ ಫೌಂಡ್ ಗಳಿಗೆ ಮಾರಾಟ ಮಾಡಲು ಉದ್ದೇಶಿಸಿದ್ದರು ಎಂದು ಲಂಡನ್ ನ ಪತ್ರಿಕೆಯೊಂದು ವರದಿ ಮಾಡಿದೆ.

ರುಬಿನಾ ತಂದೆ ರಫಿಖ್ ಖುರೇಷಿ ಕಾನೂನು ಬಾಹಿರವಾಗಿ ದತ್ತು ನೀಡುವ ಮೂಲಕ ತನ್ನ ಮಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲು ಉದ್ದೇಶಿಸಿದ್ದ ಎಂದು ಪತ್ರಿಕೆ ತಿಳಿಸಿದೆ. ಇಂಗ್ಲೆಂಡ್ ನ ಅಂತರ್ಜಾಲ ತಾಣ 'ನ್ಯೂಸ್ ಆಫ್ ದ ವರ್ಲ್ಡ್' ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಸ್ಲಂಡಾಗ್...ಸಿನಿಮಾ ನಿರ್ಮಾಪಕರಿಂದ ನಮ್ಮ ಕುಟುಂಬಕ್ಕೆ ಯಾವುದೇ ಸಂಭಾವನೆ ದೊರೆತಿಲ್ಲ. ವಿಧಿ ಇಲ್ಲದೆ ನಾನು 2 ಲಕ್ಷ ಫೌಂಡ್ ಗಳಿಗೆ ಮಗಳನ್ನು ಮಾರಾಟ ಮಾಡಲು ಉದ್ದೇಶಿಸಿದ್ದೇನೆ ಎಂದು ಆತ ರಹಸ್ಯ ಕಾರ್ಯಾಚರಣೆ ನಡೆಸಿದ ವರದಿಗಾರನಿಗೆ ತಿಳಿಸಿದ್ದಾನೆ. ದುಬೈನ ನಕಲಿ ಶೇಖ್ ವೇಷದಲ್ಲಿ ಪತ್ರಕರ್ತರು ಈ ಕಾರ್ಯಾಚರಣೆ ನಡೆಸಿದ್ದರು.

ರುಬಿನಾ ತಾಯಿಗೆ ಆಘಾತ
ತನ್ನ ವಿಚ್ಛೇದಿತ ಪತಿ ಖುರೇಷಿ ಮಗಳನ್ನು ಮಾರಾಟ ಮಾಡುತ್ತಿರುವ ವಿಷಯ ತಿಳಿದು ರುಬಿನಾ ತಾಯಿ ಖುಷಿ ಆಘಾತಕ್ಕೆ ಒಳಗಾಗಿದ್ದಾರೆ. ಹದಿನೈದು ದಿನಗಳ ಹಿಂದೆಯೇ ತನ್ನ ಹಿರಿಯ ಮಗಳು ಸನಾ ಈ ವಿಷಯ ತನಗೆ ತಿಳಿಸಿದ್ದಳು ಎಂದು ಆಕೆ ಹೇಳಿದ್ದಾರೆ. ಖುರೇಷಿ ಎರಡನೇ ಪತ್ನಿ ಮೀನಾಗೆ ಯಾವಾಗಲೂ ಹಣದ ಹುಚ್ಚು.ಮಲಮಗಳನ್ನು ಮಾರಾಟ ಮಾಡಿ ಹೇಗಾದರೂ ಹಣ ಮಾಡಬೇಕು ಎಂದು ಈ ಕೆಲಸಕ್ಕೆ ಕೈಹಾಕಿದ್ದಾಳೆ ಎಂದು ಖುಷಿ ಆರೋಪಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!(ವಿಮರ್ಶೆ)
ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್
ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ
ಸ್ಲಂಡಾಗ್ ಚಿತ್ರದ ಗಳಿಕೆ ರು.800 ಕೋಟಿಗಳು
ಧರ್ಮ, ಮಾರ್ಕ್ಸ್‌ವಾದ ಮತ್ತು ಕೊಳಚೇನಾಯಿ ಎಂಬ ಚಲನಚಿತ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada